ಜಿಲ್ಲೆ

ಹೈಮಾಸ್ಟ್​ ವಿದ್ಯುತ್​ ದೀಪ ಅಳವಡಿಸುವ ವಿಚಾರಕ್ಕೆ ಗಲಾಟೆ

ಮಾಸ್ತಿ: ಮಾಲೂರು ತಾಲೂಕು ಕರಿಸಂದ್ರ ಗ್ರಾಮದಲ್ಲಿ ಹೈಮಾಸ್ಟ್​ ವಿದ್ಯುತ್​ ದೀಪ ಅಳವಡಿಕೆ ವಿಚಾರದಲ್ಲಿ ಆರಂಭವಾದ ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ಗ್ಯಾರಂಟಿ ಫಲಾನುಭವಿ ಸಮಿತಿ ಸದಸ್ಯ, ಯುವ ಕಾಂಗ್ರೆಸ್​ ತಾಲೂಕು ಟಕದ ಉಪಾಧ್ಯಕ್ಷ ಪ್ರವಿಣ್​ ಕುಮಾರ್​ ಹಾಗೂ ಕುಟುಂಬದ ನಾಲ್ವರು ತೀವ್ರ ಗಾಯಗೊಂಡು ಆಸ್ವತ್ರೆಗೆ ದಾಖಲಾಗಿದ್ದಾರೆ.

ಪ್ರವಿಣ್​ ಕುಮಾರ್​, ಆತನ ತಂದೆ ವೆಂಕಟಸ್ವಾಮಿ, ಸಹೋದರರಾದ ಪ್ರಸನ್ನ ಕುಮಾರ, ಲಕ್ಷಿ$್ಮನಾರಾಯಣ, ರೇಣುಕಮ್ಮ ಗಾಯಗೊಂಡವರು. ಪಿಕಾರ್ಡ್​ ಬ್ಯಾಂಕ್​ ಮಾಜಿ ಉಪಾಧ್ಯಕ್ಷ ಮಂಜುನಾಥ, ಆತನ ಸಹೋದರ ಮುನಿರಾಜು, ಆನಂದ, ಮಧುಚಂದ್ರ, ಮಂಜುನಾಥ ಸೇರಿ ಇನ್ನಿತರರು ಹಲ್ಲೆ ಮಾಡಿದವರು ಎನ್ನಲಾಗಿದೆ.

ಮಂಜುನಾಥ ಅವರು ಮನೆ ಸಮೀಪ ಹೈಮಾಸ್ಟ್​ ವಿದ್ಯುತ್​ ದೀಪ ಅಳವಡಿಸುವಂತೆ ಒತ್ತಾಯಿಸಿದ್ದಾರೆೆ. ಆದರೆ, ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ಗ್ರಾಮದ ಮಧ್ಯದಲ್ಲಿ ಅಳವಡಿಸಲು, ಇಲ್ಲವೇ ಶಾಲೆಯ ಸಮೀಪ ಅಳವಡಿಸುವಂತೆ ಪ್ರವಿಣ್​ ಕುಮಾರ್​ ಹೇಳಿದ್ದೇ ಕಲಹಕ್ಕೆ ಕಾರಣವಾಗಿದೆ. ಮಾಸ್ತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.