ಜಿಲ್ಲೆ

ಪ್ರೋತ್ಸಾಹದಿಂದ ಮಕ್ಕಳ ಪ್ರತಿಭೆ ಹರಿತ : ಕಸಾಪ ಪುತ್ತೂರು ಅಧ್ಯಕ್ಷ ಉಮೇಶ್ ಅನಿಸಿಕೆ

ಉಪ್ಪಿನಂಗಡಿ: ಮಕ್ಕಳಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದರೆ ಅವರೊಳಗಿನ ಪ್ರತಿಭೆ ಅರಳಲು ಸಾಧ್ಯ ಎಂಬುದನ್ನು ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಿರಿಸಿಂಗಾರ ಸಾಹಿತ್ಯ ಸಂಘ ಸಾಧಿಸಿ ತೋರಿಸಿದೆ ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು.

ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ಸಿರಿಸಿಂಗಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಕವನ ಸಂಕಲನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಎಂಜಿರಪಳಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಶಾಲಾಡಳಿತ ಅಧ್ಯಕ್ಷ ಸುನೀಲ್ ಅನಾವು ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಯು.ಜಿ.ರಾಧಾ, ಪ್ರಮುಖರಾದ ಮಹಾಲೀಂಗೇಶ್ವರ ಭಟ್, ಅನುರಾಧಾ ಆರ್.ಶೆಟ್ಟಿ, ಉದಯ ಅತ್ರಮಜಲು, ರಘುರಾಮ ಭಟ್, ವಿಮಲಾ, ತೇಜಾಕ್ಷಿ ಉಪಸ್ಥಿತರಿದ್ದರು.