ಕಂಪ್ಲಿಯ ಅತಿಥಿಗೃಹದಲ್ಲಿ ಮಂಗಳವಾರ ಆಯೋಜಿದ್ದ ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಎಸಿ ಎನ್.ಹೇಮಂತ್ ಮಾತನಾಡಿದರು. ತಹಸೀಲ್ದಾರ್ ಗೌಸಿಯಾಬೇಗಮ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಇದ್ದರು. 
ಜಿಲ್ಲೆ

ಉನ್ನತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ: ಎಸಿ ಎನ್.ಹೇಮಂತ್ ಅಭಿಮತ

Gangavati - Desk - Veeresh S Ullagaddi

ಕಂಪ್ಲಿ: ವಿದ್ಯಾರ್ಥಿಗಳು ಕಂದಾಯ ಇಲಾಖೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಉನ್ನತಿ ಯೋಜನೆಯ ಮೂಲಕ ಶಾಲಾ ಹಂತದಲ್ಲಿ ಜಾತಿ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಳ್ಳಾರಿ ಎಸಿ ಎನ್.ಹೇಮಂತ್ ಹೇಳಿದರು.


ಪಟ್ಟಣದ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉನ್ನತಿ ಯೋಜನೆ ರೂಪಿಸಿ, ಕಂದಾಯ ಇಲಾಖೆಯ ಸೇವೆ ತಲುಪಿಸಲು ಬಳ್ಳಾರಿ ಡಿಸಿ, ಜಿಪಂ ಸಿಇಒ ಮುಂದಾಗಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಜಿಲ್ಲೆಯ 7000 ವಿದ್ಯಾರ್ಥಿಗಳಿಗೆ 371ಜೆ ಪ್ರಮಾಣ ಪತ್ರ ನೀಡಲಾಗುತ್ತಿದೆ.

ಎರಡನೇ ಹಂತದಲ್ಲಿ ಮುಖ್ಯಶಿಕ್ಷಕರ ಮೂಲಕ ಅರ್ಜಿ ಸ್ವೀಕರಿಸಿ, ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ವಿತರಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಉನ್ನತ ಹುದ್ದೆಗಳಿಸಲು ಪ್ರವೇಶ ಪರೀಕ್ಷೆ ಎದುರಿಸಲು ಕೌಶಲ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.


ಬಳ್ಳಾರಿ ಉಪ ವಿಭಾಗದ ಐದು ತಾಲೂಕುಗಳಲ್ಲಿ ರೈತ ಹಿತಾಸಕ್ತಿಗಾಗಿ ಇನಾಮು ರದ್ದತಿಗಾಗಿ 12,500 ಅರ್ಜಿಗಳನ್ನು ಸ್ವೀಕರಿಸಿದ್ದು, ಈಗಾಗಲೇ 5000 ಅರ್ಜಿ ವಿಲೇವಾರಿಯಾಗಿದ್ದು, ಉಳಿದ ಅರ್ಜಿಗಳನ್ನು ಆ.15ರೊಳಗೆ ವಿಲೇವಾರಿಗೊಳಿಸುವ ಗುರಿ ಹೊಂದಿದೆ. ಶಾಸಕ ಜೆ.ಎನ್.ಗಣೇಶ್ ಸಹಕಾರದಿಂದ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿ ಇನಾಮು ಮುಕ್ತಗೊಳಿಸಿ ಪಹಣಿ ನೀಡಿಲಾಗಿದೆ. ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ಪುರಸಭೆಗೆ ಸೂಚಿಸಲಾಗಿದೆ ಎಂದರು. ತಹಸೀಲ್ದಾರ್ ಗೌಸಿಯಾಬೇಗಮ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಇದ್ದರು.