ಜಿಲ್ಲೆ

ತಂತ್ರಜ್ಞಾನಕ್ಕೆ ತಕ್ಕಂತೆ ಜ್ಞಾನ ಮೇಲ್ದರ್ಜೆಗೆ ಏರಿಸಿ: ಎಚ್.ಎಂ.ಐಮೋಸಲಾಮಿ

ಆರ್.ಕೃಷ್ಣ

ಮೈಸೂರು: ದಿನದಿನವೂ ತಂತ್ರಜ್ಞಾನ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ನಮ್ಮ ಜ್ಞಾನವನ್ನು ಮೇಲ್ದರ್ಜೆಗೆ ಏರಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ಪ್ಯಾಲಿಸ್ಟೇನ್‌ನ ಗಾಝಾ ನೆಟ್‌ವರ್ಕ್ಸ್ ಆ್ಯಂಡ್ ಸಿಸ್ಟಮ್ ಇಂಜಿನಿಯರ್ ಷರಾಫ್ ಎಚ್.ಎಂ.ಐಮೋಸಲಾಮಿ ಸಲಹೆ ನೀಡಿದರು.

ಹೂಟಗಳ್ಳಿಯಲ್ಲಿರುವ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಟೆಕ್ ಕ್ಲಬ್ ಮತ್ತು ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನೆಟ್ ವರ್ಕಿಂಗ್ ಆ್ಯಂಡ್ ಸಿಸ್ಟಮ್ ಇಂಜಿನಿಯರಿಂಗ್ ವಿಷಯ ಕುರಿತ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರ ಪ್ರತಿದಿನ ಬೆಳೆಯುತ್ತಿರುತ್ತದೆ. ನಿನ್ನೆ ಇದ್ದದ್ದು ಇಂದು ಬದಲಾಗಿರುತ್ತದೆ. ಇಂದಿನದು ನಾಳೆಗೆ ಹಳೆಯದಾಗಿರುತ್ತದೆ. ಹಾಗಾಗಿ ನಾವು ಪ್ರತಿದಿನ ಅದಕ್ಕೆ ಹೊಂದಿಕೊಂಡು ಮುನ್ನುಗ್ಗಬೇಕು. ಇಂದಿನ ತಂತ್ರಜ್ಞಾನ ಯುಗವನ್ನು ಕಂಪ್ಯೂಟರ್ ಯುಗ, ಮೊಬೈಲ್ ಎನ್ನುತ್ತಿದ್ದು, ಅದರ ಸಮರ್ಪಕ ಬಳಕೆ ಮತ್ತು ಉಪಯೋಗಕ್ಕೆ ಬೇಕಾಗಿರುವ ನೆಟ್‌ವರ್ಕಿಂಗ್ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ.ಎಂ.ಬಿ.ಮಹೇಶ ಮಾತನಾಡಿ, ತಾಂತ್ರಿಕತೆಯನ್ನು ಪರಿಚಯಿಸುವ ಈ ಕಾರ್ಯಕ್ರಮ ಮಹತ್ವದ್ದಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ವಿಭಾಗದ ಮುಖ್ಯಸ್ಥೆ ಎಂ.ಸುಧಾ, ಅಧ್ಯಾಪಕ ಎಂ.ಎನ್. ಶೋಭನ್ ಇದ್ದರು.