ಬಂಟ್ವಾಳ: ಬಿ.ಸಿ.ರೋಡು ಬಳಿಯ ಮೊಡಂಕಾಪುವಿನ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಚಲನಚಿತ್ರ ನಟ ಉಪೇಂದ್ರ ಮಂಗಳವಾರ ಭೇಟಿ ನೀಡಿದರು. ತಾನು ನಿರ್ದೇಶಿಸಿ ನಟಿಸಿರುವ ಹೊಸ ಚಲನಚಿತ್ರ ಯಶಸ್ವಿಯಾಗಲೆಂದು ವನದುರ್ಗಾ ಕ್ಷೇತ್ರದಲ್ಲಿ ಸರ್ವಾಂಲಂಕಾರ ಸೇವೆ ಸಲ್ಲಿಸಿದರು. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ವೇಲುಹರಿ, ನವೀನ್ ಮನೋಹರ್ ಅವರ ಜೊತೆಗಿದ್ದರು. ಮೊಡಂಕಾಪು ಕ್ಷೇತ್ರದಲ್ಲಿರುವ ವಿಶೇಷ ಕೆರೆಯ ಬಗ್ಗೆ ರಾಜೇಶ್ ಭಟ್ ಮಾಹಿತಿ ನೀಡಿದರು.
ಮಧ್ಯಾಹ್ನ ಪೂಜೆ ಬಳಿಕ ಕ್ಷೇತ್ರದಲ್ಲಿ ಅನ್ನದಾನ ಪ್ರಸಾದ ಸ್ವೀಕರಿಸಿದರು. ಮೊಡಂಕಾಪು ವನದುರ್ಗ ಕ್ಷೇತ್ರದ ಗುರುದತ್ ಶೆಣೈ, ಪಾಂಡುರಂಗ ಶೆಣೈ ಉಪಸ್ಥಿತರಿದ್ದರು.