ವಿಶ್ವಕರ್ಮ ಸಮಾಜದ ನೂತನ ಬ್ರಹ್ಮೋಪದೇಶ ವಟುಗಳಿಗೆ ಉಪಾಕರ್ಮ ಸಂಸ್ಕಾರ ನೆರವೇರಿತು. 
ಜಿಲ್ಲೆ

ವಟುಗಳಿಗೆ ಉಪಾಕರ್ಮ ಸಂಸ್ಕಾರ

ಸೌಮ್ಯ ಆರ್

ಕಾಸರಗೋಡು: ಶ್ರಾವಣ ಹುಣ್ಣಿಮೆಯ ಅಂಗವಾಗಿ ವಿಶ್ವಕರ್ಮ ಸಮಾಜದ ನೂತನ ಬ್ರಹ್ಮೋಪದೇಶವಾದ ವಟುಗಳಿಗೆ ಉಪಾಕರ್ಮ ಸಂಸ್ಕಾರ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಶ್ರೀ ಕಾಳಿಕಾಂಬಾ ಮಠದ ಪುರೋಹಿತ ಶ್ರೀ ವಾಸುದೇವ ಆಚಾರ್ಯ ಪೌರೋಹಿತ್ಯದಲ್ಲಿ ನೆರವೇರಿತು.

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಳ ಬಳಿ ಮಧುವಾಹಿನಿ ಹೊಳೆಯಲ್ಲಿ ದಂಡು ಕೋಲು ವಿಸರ್ಜನೆ ನಡೆಯಿತು. ಆಡಳಿತ ಸಮಿತಿ ಉಪಾಧ್ಯಕ್ಷ ಜಗದೀಶ್ ಆಚಾರ್ಯ ಕಂಬಾರು, ಕಾರ್ಯದರ್ಶಿ ತಾರಾನಾಥ ಆಚಾರ್ಯ ಮಧೂರು, ಜತೆ ಕಾರ್ಯದರ್ಶಿ ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ವೆಂಕಟ್ರಮಣ ಆಚಾರ್ಯ ಮೀಪುಗುರಿ ಮೊದಲಾದವರಿದ್ದರು.