ವಿಜಯಪುರದ ಸಿಎನ್​ಎಫ್​ಇ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತ ಕರ್ನಾಟಕದ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀನಾಥ ಪೂಜಾರಿ ಮಾತನಾಡಿದರು. ಭಾಗ್ಯಶ್ರೀ ಬಡಿಗೇರ, ಆರತಿ ಶಹಾಪುರ ಮತ್ತಿತರರಿದ್ದಾರೆ.  
ಜಿಲ್ಲೆ

ಜಾಗೃತ ಕರ್ನಾಟಕದ ಲಾಂಛನ ಅನಾವರಣ

ವಿಜಯಪುರ:  ನಮ್ಮ ಕರ್ನಾಟಕ ನಮ್ಮ ಮಾದರಿ, ನಿರ್ಮಲಾ ಸೀತಾರಾಮನ್​ & ಕೃಷ್ಣ ಬೈರೇಗೌಡ ಮುಖಾಮುಖಿ, ಕರ್ನಾಟಕಕ್ಕೆ ಒಕ್ಕೂಟ ಸರ್ಕಾರದ ಅನ್ಯಾಯ ಸೇರಿ ಹಲವು ವಿನೂತನ ಕಾರ್ಯಕ್ರಮಗಳಿಂದ ಗಮನ ಸೆಳೆದಿದ್ದ ಜಾಗೃತ ಕರ್ನಾಟಕ ಇಂದು ರಾಜಕೀಯ ಸಂಟನೆಯಾಗಿ ೂಷಣೆಗೊಂಡಿತು.

ಇಲ್ಲಿನ ಸ್ಟೇಷನ್​ ರಸ್ತೆಯಲ್ಲಿರುವ ಸಿಎನ್​ಎಫ್​ಇ ಕಚೇರಿಯಲ್ಲಿ ಬದಲಾವಣೆಗಾಗಿ ರಾಜಕೀಯ&ರಾಜಕೀಯದ ಬದಲಾವಣೆ ಎಂಬ ೂಷಣೆಯೊಂದಿಗೆ ಜಾಗೃತ ಕರ್ನಾಟಕ ರಾಜ್ಯದ ಆರು ವಲಯಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಭಾಗವಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕದ ಲೋಗೋ ಬಿಡುಗಡೆ ಮೂಲಕ ರಾಜಕೀಯ ಸಂಟನೆ ಎಂದು ೂಷಣೆ ಮಾಡಲಾಯಿತು.

ಮುಖಂಡ ಶ್ರೀನಾಥ ಪೂಜಾರಿ ಮುನ್ನೋಟದ ಕುರಿತು ಮಾತನಾಡಿದರು. ಭಾಗ್ಯಶ್ರೀ ಬಡಿಗೇರ, ವೇದಾ ಮುರಗೋಡ ಮತ್ತಿತರರು ಲೋಗೋ ಬಿಡುಗಡೆಗೊಳಿಸಿದರು. ಪಾಲಿಕೆ ಸದಸ್ಯೆ ಆರತಿ ಶಹಾಪುರ ಜಾಗೃತ ಕರ್ನಾಟಕದ ಸಂಕಲ್ಪ ಬೋಧಿಸಿದರು.

ಜಮಾತೆ ಇಸ್ಲಾಮ್​ ಹಿಂದ್​ ಪ್ರಮುಖರಾದ ಯು.ಎಚ್​. ಖಾದಿರ್​, ಅಸಂಟಿತ ಮಹಿಳಾ ಕಾರ್ಮಿಕರ ಸಂದ ಜಿಲ್ಲಾ ಮುಖಂಡರಾದ ಡಾ. ಭುವನೇಶ್ವರಿ ಕಾಂಬಳೆ, ಕೆಎಂಎ ಜಿಲ್ಲಾಧ್ಯಕ್ಷ ಇಮಾಮಸಾಬ ಮುಲ್ಲಾ, ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಶ್ರೀಕಾಂತ ಚಿಮ್ಮಲಗಿ, ರಮೇಶ ಹಾದಿಮನಿ, ಎಚ್​.ಎಚ್​. ದೊಡಮನಿ, ಎಂ.ಎ. ಭ, ಸಂಜೀವ ಪಾಂಡ್ರೆ ಮತ್ತಿತರರಿದ್ದರು. ದೇವೇಂದ್ರ ಕಟ್ಟಿಮನಿ ಸ್ವಾಗತಿಸಿದರು. ಮಾದೇಶ ಚಲವಾದಿ ನಿರೂಪಿಸಿ ವಂದಿಸಿದರು.