ಜಿಲ್ಲೆ

ಮಾಹಿತಿ ಫಲಕಗಳ ಅನಾವರಣ

ಆದರ್ಶ್. ಎಂ.ಕೆ.

ಮಡಿಕೇರಿ: ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹಲವೆಡೆ ಪ್ರವಾಸಿ ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸುವ ಯೋಜನೆಗೆ ರಾಜಾಸೀಟ್ ಹೊರಬದಿಯಲ್ಲಿ ಭಾನುವಾರ ಫಲಕ ಅನಾವರಣಗೊಳಿಸುವ ಮೂಲಕ ಚಾಲನೆ ದೊರೆಯಿತು.

ನಗರದ ಹೆಸರಾಂತ ಪ್ರವಾಸೀ ತಾಣ ರಾಜಾಸೀಟ್‌ನಲ್ಲಿ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರಾಜಾಸೀಟ್‌ನಿಂದ ಇರುವ ದೂರದ ಮಾಹಿತಿಯುಳ್ಳ ಬೃಹತ್ ಹೋರ್ಡಿಂಗ್‌ನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಇಂಥ ಮಾಹಿತಿ ಫಲಕಗಳನ್ನು ಪ್ರವಾಸಿಗರ ಅನುಕೂಲತೆಗಾಗಿ ಜಿಲ್ಲೆಯ ೧೨ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಳವಡಿಸಲಾಗುತ್ತಿದ್ದು, ಆಯಾ ಪ್ರವಾಸಿ ತಾಣದಿಂದ ಬೇರೆ ಕಡೆಗಳಲ್ಲಿನ ಪ್ರವಾಸಿ ತಾಣಕ್ಕೆ ಎಷ್ಟು ದೂರವಾಗಲಿದೆ. ಆ ಪ್ರವಾಸಿ ತಾಣದ ವಿಶೇಷ ಏನೆಂಬ ಮಾಹಿತಿ ಈ ಹೋರ್ಡಿಂಗ್ ನಲ್ಲಿರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಸೀರ್, ನಗರಸಭೆಯ ಪೌರಾಯುಕ್ತ ರಮೇಶ್ ಹಾಜರಿದ್ದರು.