ಸುಳ್ಯ: ಮಹಾತ್ಮಾ ಗಾಂಧೀಜಿ ಪೌರಾಣಿಕ, ಚಾರಿತ್ರಿಕ ಹಾಗೂ ನಾಯಕತ್ವ ವ್ಯಕ್ತಿತ್ವದ ಪ್ರತೀಕ ಎಂದು ಲೇಖಕ ಸುಂದರ್ ಕೇನಾಜೆ ಹೇಳಿದರು.
ನಪಂ ವತಿಯಿಂದ ಗಾಂಧಿಚಿಂತನ ವೇದಿಕೆ, ಗಾಂಧಿನಗರದ ಗಾಂಧಿ ಪಾರ್ಕ್ ಗೆಳೆಯರ ಬಳಗದ ಸಹಕಾರದಲ್ಲಿ ಗಾಂಧಿ ಪಾರ್ಕ್‌ನ ಗಾಂಧಿಕಟ್ಟೆಯಲ್ಲಿ ಗಾಂಧಿ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್‌ನಾಥ್ ಜಿ, ಸೇಂಟ್ ಬ್ರಿಜಿಡ್ ಚರ್ಚ್‌ನ ವಿಕ್ಟರ್ ಡಿಸೋಜ, ಗಾಂಧಿ ನಗರ ಜಮಾತ್ ಅಧ್ಯಕ್ಷ ಮಹಮ್ಮದ್ ಕೆ.ಎಂ.ಎಸ್, ಪತ್ರಕರ್ತ ಡಾ.ಯು.ಪಿ.ಶಿವಾನಂದ, ಆದಂ ಹಾಜಿ ಕಮ್ಮಾಡಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅನಾವರಣ ನೆರವೇರಿಸಿದರು.
ಹರೀಶ್ ಬಂಟ್ವಾಳ್ ಸ್ವಾಗತಿಸಿದರು. ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಶರೀಫ್ ಕಂಠಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಉಮ್ಮರ್, ಉನೈಸ್ ಪೆರಾಜೆ, ಖಲಂದರ್ ಎಲಿಮಲೆ, ಇಕ್ವಾಲ್ ಸುಣ್ಣಮೂಲೆ ಸಹಕರಿಸಿದರು.