ಸೋಮವಾರಪೇಟೆ ಮಹಿಳಾ ಸಮಾಜದಲ್ಲಿರುವ ನಾವು ಪ್ರತಿಷ್ಠಾನದ ಮಕ್ಕಳ ಹಕ್ಕುಗಳ ಅರಿವು ಮತ್ತು ಕಲಿಕಾ ಕೇಂದ್ರಕ್ಕೆ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ಹಾಗು ಮಕ್ಕಳ ಹೋರಾಟಗಾರರಾದ ಡಾ. ಎನ್.ವಿ.ವಾಸುದೇವ ಶರ್ಮಾ ಭೇಟಿ ನೀಡಿ ಮಕ್ಕಳ ಹಕ್ಕುಗಳು ಭಿತ್ತಿಪತ್ರ ಅನಾವರಣಗೊಳಿಸಿದರು. ಲಕ್ಷ್ಮೀಶರ್ಮಾ, ಗೌತಮ್, ಸುಮನಾ, ಸವಿತಾ ಇದ್ದರು. 
ಜಿಲ್ಲೆ

ಮಕ್ಕಳ ಹಕ್ಕುಗಳ ಭಿತ್ತಿಪತ್ರ ಅನಾವರಣ

ಸೋಮವಾರಪೇಟೆ: ನಾವು ಪ್ರತಿಷ್ಠಾನದ ಮಕ್ಕಳ ಹಕ್ಕುಗಳ ಅರಿವು ಮತ್ತು ಕಲಿಕಾ ಕೇಂದ್ರಕ್ಕೆ ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಹಾಗೂ ಮಕ್ಕಳ ಹೋರಾಟಗಾರ ಡಾ.ಎನ್.ವಿ.ವಾಸುದೇವ ಶರ್ಮಾ ಇತ್ತೀಚೆಗೆ ಭೇಟಿ ನೀಡಿ ಮಕ್ಕಳ ಹಕ್ಕುಗಳ ಬಗೆಗಿನ ಭಿತ್ತಿಪತ್ರ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳ ಗ್ರಾಮಸಭೆಗಳ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಯಿತು. ನಂತರ ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ ಎಂದರು.

ಸಮಾಜ ಸೇವೆಯ ಅಭಿಲಾಷೆ ಹೊಂದಿದವರು ಶಾಲೆ, ಸರ್ಕಾರ, ಸಮುದಾಯಗಳ ಜತೆ ಮಕ್ಕಳ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಫಲಿತಾಂಶ ಮಾತ್ರ ವಿಳಂಬವಾದರೂ ಒಳ್ಳೆಯ ಫಲಿತಾಂಶ ನಿರೀಕ್ಷೆ ಮಾಡಬಹುದು ಎಂದು ಹೇಳಿದರು.

ಮಕ್ಕಳ ಪರವಾಗಿ ಪ್ರಚಾರ, ಗ್ರಂಥಾಲಯ ಮತ್ತು ಸ್ವಯಂ ಅರಿವು ಕೇಂದ್ರದ ಮೂಲಕ ಮಕ್ಕಳ ಪರ ಕೆಲಸದಲ್ಲಿ ತೊಡಗಿರುವ ನಾವು ಪ್ರತಿಷ್ಠಾನ ತಂಡದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್‌ನ ಲಕ್ಷ್ಮೀಶರ್ಮಾ, ರತ್ನಮಾಲಾ, ನಾವು ಪ್ರತಿಷ್ಠಾನ ಸಂಸ್ಥೆಯ ಮುಖ್ಯಸ್ಥ ಗೌತಮ್ ಕಿರಗಂದೂರು, ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯೂ, ಸವಿತಾ, ಶಶಿಕುಮಾರ್, ಪ್ರಜ್ವಲ್, ಬಿ.ಕೆ.ಕುಮಾರಿ, ವಿಕ್ರಂ ಸಾಗರ್ ಇದ್ದರು.