ಸಿಂಧನೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ನೌಕರ ಶ್ರೀಧರ್‌ಗೆ ಬಹುಜನ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಮನವಿ ಸಲ್ಲಿಸಿತು. ರಾಜ್ಯ ಘಟಕದ ಅಧ್ಯಕ್ಷ ಭೀಮೇಶ ಕವಿತಾಳ, ಸದಸ್ಯರಾದ ಕೆ.ವೀರೇಶ ಹಂಚಿನಾಳ, ಅಂಬಣ್ಣ ಮಲ್ಲಾಪುರ, ಎಂ.ಡಿ.ದುರುಗಪ್ಪ ಇದ್ದರು. 
ಜಿಲ್ಲೆ

ಅಸ್ಪಶ್ಯತೆ ನಿವಾರಣೆಗೆ ಜಾಗೃತಿ ಮೂಡಿಸಿ

Kopala - Desk - Eraveni

ಸಿಂಧನೂರು: ಎಸ್ಸಿ-ಎಸ್ಟಿ ಜನರಿಗೆ ಸಿಗುವ ಸರ್ಕಾರಿ ಸೌಲಭ್ಯ ಹಾಗೂ ಅಸ್ಪಶ್ಯತೆ ನಿವಾರಣೆ ಕುರಿತು ಹಳ್ಳಿಗಳಲ್ಲಿ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಬೇಕೆಂದು ಬಹುಜನ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಗುರುವಾರ ಸಮಾಜ ಕಲ್ಯಾಣ ಇಲಾಖೆ ನೌಕರ ಶ್ರೀಧರಗೆ ಮನವಿ ಸಲ್ಲಿಸಿತು.

ತಾಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ಬೀದಿ ನಾಟಕದ ಮೂಲಕ ಅಸ್ಪಶ್ಯತೆ ನಿವಾರಣೆ ಕುರಿತು ಜಾಗೃತಿ ಮೂಡಿಸಬೇಕು. ಜತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಬೇಕು.

ಆದರೆ, ಸಹಾಯಕ ನಿರ್ದೇಶಕಿ ವಿಜಯಾ ಅವರು ಬಂದಾಗಿನಿಂದಲೂ ಈ ಕಾರ್ಯಗಳು ನಡೆಸುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಇಂದಿಗೂ ಅಸ್ಪಶ್ಯತೆ ಆಚರಣೆ ಜೀವಂತವಾಗಿದೆ.

ದಲಿತರಿಗೆ ಹೋಟೆಲ್, ಕ್ಷೌರಿಕ, ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯ ಸಂಗತಿ ಎಂದರು.

ಇಲಾಖೆ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಶುದ್ಧ ಕುಡಿವ ನೀರು, ಸ್ವಚ್ಛತೆ ಮಾಯವಾಗಿದೆ. ಕೊಠಡಿಗಳ ಬಾಗಿಲು, ಕಿಟಕಿಗಳು ಮುರಿದು ಹೋಗಿವೆ. ಬಟ್ಟೆಗಳನ್ನು ಒಣ ಹಾಕಲು ಹಗ್ಗದ ವ್ಯವಸ್ಥೆ ಇಲ್ಲ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ ಇದ್ದು, ತ್ವರಿತವಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಭೀಮೇಶ ಕವಿತಾಳ, ಸದಸ್ಯರಾದ ಕೆ.ವೀರೇಶ ಹಂಚಿನಾಳ, ಅಂಬಣ್ಣ ಮಲ್ಲಾಪುರ, ಎಂ.ಡಿ.ದುರುಗಪ್ಪ, ಆನಂದ ಮಲ್ಲಾಪುರ, ವಿರುಪಣ್ಣ ಬೂದಿವಾಳ, ಮಾರೆಪ ್ಪ ರಾಮತ್ನಾಳ ಇದ್ದರು.