ಜಿಲ್ಲೆ

ಕನಿಷ್ಠ ವೇತನ ಅವೈಜ್ಞಾನಿಕ ಜಾರಿ

ಗಿರೀಶ ಸಗರ

ವಿಜಯಪುರ:ಅವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬವಿಲ್ಲದೆ ತಕ್ಷಣ ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂದ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್​ ಅವರಿಗೆ ಮನವಿ ಸಲ್ಲಿಸಿದರು.

ಸಂ ಜಿಲ್ಲಾಧ್ಯಕ್ಷ ಅಯ್ಯನಗೌಡ ಬಾಗೇವಾಡಿ ಮಾತನಾಡಿ, ರಾಜ್ಯ ಸರ್ಕಾರ ಪಂಚಾಯತ್​ ರಾಜ್​ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನ ಅವೈಜ್ಞಾನಿಕವಾಗಿ ಜಾರಿ ಮಾಡಿದೆ.

ಈ ಕುರಿತು ಸಂವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದು, ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದು ಕನಿಷ್ಠ ವೇತನ ನಿಗದಿ ಮಾಡಲು 10 ವಾರಗಳ ಗಡುವು ನೀಡಿತ್ತು. ಸದ್ಯ ಆದೇಶವಾಗಿ ಮೂರು ವರ್ಷ ಕಳೆದಿದೆ ಎಂದು ದೂರಿದರು.

ಸಂವು ಕರ ವಸೂಲಿಗಾರು, ಗುಮಾಸ್ತ, ಕ್ಲಕ್​, ಡಾಟಾ ಎಂಟ್ರಿ ಆಪರೇಟರ್​ ಈ ಹುದ್ದೆಗಳನ್ನು ಅತಿ ಕುಶಲರಾಗಿ ಪರಿಗಣಿಸುವ ಮೂಲಕ ಮೂಲ ವೇತನವನ್ನು 38,021 ರೂ. ಗಳನ್ನು ನಿಗದಿ ಪಡಿಸಬೇಕು. ನೀರುಗಂಟಿ, ಪಂಪ್​ ಆಪರೇಟರ್​- ಕಂ ಮೆಕ್ಯಾನಿಕ್​ ಹುದ್ದೆದವರಿಗೆ ಮೂಲ ವೇತನ 33.062 ರೂ. ಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಸಂದ ಶಿವಾನಂದ ಬಿರಾದಾರ, ಅಬ್ದುಲ್​ಸ ರಜಾಕ್​ ತಮದಡ್ಡಿ, ಗಂಗಾಧರ ಪಾಟೀಲ, ಸೋಮನಿಂಗ ಕಾಗರ, ಸಂತೋಷ ಹಿರೇಮಠ, ಜಮೀರ್​ ನದಾಫ, ಎಸ್​.ಡಿ. ಹಳ್ಳಿ, ಹೂವಣ್ಣ ಪೂಜಾರಿ, ಬಸವರಾಜ ಜೊಲ್ಲೆ, ಭೀಮ ಲಮಾಣಿ, ಲಕ್ಷ$್ಮಣ ಪಾಟೀಲ, ಮಲ್ಲಿಕಾರ್ಜುನ ಮಾದರ, ಮಲ್ಲಪ್ಪ ಚೆಳ್ಳಗಿ, ಚಾಂದಸಾಬ, ನಾರಾಯಣ ಬಡಿಗೇರ, ಅಬ್ಬಾಸ್​ ಅಲಿ, ಕಲ್ಲಪ್ಪ, ಸುವರ್ಣ, ಸುನಂದಾ ಮತ್ತಿತರರಿದ್ದರು.

ಕನಿಷ್ಠ ಕೂಲಿ ಆದೇಶವನ್ನು ಜಾರಿ ಮಾಡುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂದ ಪದಾಧಿಕಾರಿಗಳು ವಿಜಯಪುರದಲ್ಲಿ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಯ್ಯನಗೌಡ ಬಾಗೇವಾಡಿ, ಶಿವಾನಂದ ಬಿರಾದಾರ, ಗಂಗಾಧರ ಪಾಟೀಲ ಮತ್ತಿತರರಿದ್ದಾರೆ.