ಮಡಿಕೇರಿ:
ದಸರೆ ಎಂದ ಕೂಡಲೇ ಮೊದಲು ಮೈಸೂರು ದಸರಾ ಕಣ್ಣುಮುಂದೆ ಬರುತ್ತದೆ. ಇದೇ ರೀತಿಯಲ್ಲಿ ಕತ್ತಲಿನಲ್ಲಿ ಝಗಮಗಿಸುವ ಬೆಳಕು, ಸುರ-ಅಸುರರ ಬೃಹತ್ ಪ್ರತಿಕೃತಿಗಳ ಚಲನವಲನಗಳ ಮೂಲಕ ದೇವಲೋಕ ಭೂಮಿಗೆ ಇಳಿದಂತೆ ಕಂಡುಬರುವ ಮಡಿಕೇರಿ ದಸರಾ ಮತ್ತು ವಿಶಿಷ್ಟ ಆಚರಣೆಗಳ ಮೂಲಕ ಜನಮನ ಗೆದ್ದಿರುವ ಗೋಣಿಕೊಪ್ಪ ದಸರಾವೂ ಪ್ರಸಿದ್ದಿ ಪಡೆದುಕೊಂಡಿದೆ. ಮೈಸೂರು ದಸರಾ ಜಂಬೂ ಸವಾರಿ ಮುಗಿಯುತ್ತಿದ್ದಂತೆಯೇ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನ ಕಡೆಗೆ ಹರಿದುಬರುವುದೇ ಇಲ್ಲಿಯ ದಸರಾ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಮೈಸೂರು ದಸರಾವನ್ನು ವಿಜೃಂಭಣೆಯಿAದ ನಡೆಸುವುದಾಗಿ ಸರ್ಕಾರ ಈಗಾಗÀಲೇ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಪೂರಕ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಅರಮನೆ ನಗರಿ ತಲುಪಿದ್ದು, ತಾಲೀಮು ಕೂಡ ಶುರುಮಾಡಿವೆ. ಆದರೆ ಕೊಡಗಿನಲ್ಲಿ ದಸರಾಕ್ಕೆ ಸಂಬAಧಿಸಿದAತೆ ಈ ರೀತಿಯಲ್ಲಿ ಯಾವುದೇ ಸಿದ್ಧತೆಗಳು ಚುರುಕಾಗಿ ನಡೆಯುತ್ತಿರುವಂತೆ ಕಂಡುಬರುತ್ತಿಲ್ಲ.
'ಕಳೆದ ವರ್ಷದಂತೆ ಮಡಿಕೇರಿ ದಸರಾವನ್ನು ಅದ್ದೂರಿಯಾಗಿ ನಡೆಸಲಾಗುವುದು. ಉತ್ತಮ ಮೊತ್ತದ ಅನುದಾನವೇ ಸರ್ಕಾರದಿಂದ ಸಿಗಲಿದೆ,' ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈಗಾಗಲೇ ಹೇಳಿದ್ದಾರೆ. ಕಾರ್ಯಯೋಜನೆ ರೂಪಿಸಿಕೊಳ್ಳುವಂತೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಬAಧಿಸಿದ ದಸರಾ ಸಮಿತಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ ಸರ್ಕಾರದಿಂದ ಸಿಗಲಿರುವ ಅನುದಾನದ ಮೊತ್ತ ಇನ್ನೂ ನಿಗದಿ ಆಗದಿರುವುದರಿಂದ ಸಮಿತಿ ಪದಾಧಿಕಾರಿಗಳು ಗೊಂದಲದಲ್ಲಿ ಇದ್ದಾರೆ. ಗೋಣಿಕೊಪ್ಪದಲ್ಲೂ ಇದೇ ಪರಿಸ್ಥಿತಿ ಇದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ದಸರಾ ಹಬ್ಬ ನಮ್ಮ ಹೆಮ್ಮೆ. ಮೈಸೂರು ದಸರಾ ಮುಗಿಯುತ್ತಿದ್ದಂತೆ ಜನರು ಕೊಡಗಿನತ್ತ ಆಗಮಿಸುತ್ತಾರೆ. ರಾತ್ರಿ ಇಡೀ ದಸರಾ ಆಚರಣೆ ಜನರ ಮನ ಗೆದ್ದಿದೆ. ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ಆಚರಣೆ ನಡೆಯುತ್ತದೆ. ಆದರೆ ಈ ಬಾರಿ ಇನ್ನೂ ಸರಿಯಾದ ಸಿದ್ಧತೆಗಳು ಆಗಿಲ್ಲ. ಜನರಲ್ಲಿ, ಕಲಾತಂಡಗಳಲ್ಲಿ ಗೊಂದಲ ಮೂಡಿದೆ. ಕೂಡಲೇ ದಸರಾ ಸಿದ್ಧತೆ ಆರಂಭಗೊAಡರೆ ಒಳಿತು.
ಕಡೇಮಾಡ ಸುನಿಲ್ ಮಾದಪ್ಪ, ಉಪಾಧ್ಯಕ್ಷ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್
ಈ ಬಾರಿ ವಿಜೃಂಭಣೆಯಿAದ ದಸರಾ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಸಮಿತಿಗಳನ್ನು ರಚಿಸಿ ಅದ್ಧೂರಿ ದಸರಾ ಆಚರಣೆ ಮಾಡಲಾಗುವುದು. ಸರ್ಕಾರದಿಂದ ಒಂದು ಕೋಟಿ ರೂ. ಅನುದಾನವನ್ನು ಗೋಣಿಕೊಪ್ಪ ದಸರಾಗೆ ನೀಡುವಂತೆ ಮನವಿ ಮಾಡಲಾಗಿದೆ. ಸೂಕ್ತ ಸ್ಪಂದನೆ ಸಿಕ್ಕಲ್ಲಿ ಗೋಣಿಕೊಪ್ಪ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು.
ಕುಲ್ಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷ, ಗೋಣಿಕೊಪ್ಪ ದಸರಾ ಸಮಿತಿ
ದಸರಾವನ್ನು ಈ ಹಿಂದೆ ಸಾಂಪ್ರಾದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ದಸರಾ ಆಡಂಬರತೆಯನ್ನು ಪಡೆದುಕೊಂಡಿದೆ. ಡಿಜೆ ಸದ್ದು ಜೋರಾಗಿದೆ. ಹಬ್ಬದ ನೈಜ ಅರ್ಥ ಮರೆತಂತಿದೆ. ಸರಳವಾಗಿ ಮೂಲ ಆಚರಣೆ ಮಾಡಿದರೆ ಒಳಿತು. ಇನ್ನೇನು ಹಬ್ಬ ಸಮೀಪಿಸುತ್ತಿದೆ. ಸಿದ್ಧ್ದತೆಗಳು ಆರಂಭವಾದರೆ ಒಳ್ಳೆಯದು.
ಕಲ್ಲುಮುಟ್ಲು ಜಶ್ಮಿ ಚಿಂತು, ಉಪನ್ಯಾಸಕಿ, ಕಾವೇರಿ ಕಾಲೇಜು, ಗೋಣಿಕೊಪ್ಪ
ಗೋಣಿಕೊಪ್ಪ ದಸರಾ ಐತಿಹಾಸಿಕ ಮಹತ್ವ ಹೊಂದಿದ್ದು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಇದಕ್ಕೆ ಪ್ರತಿ ವರ್ಷ ಸರ್ಕಾರ ನಿರ್ದಿಷ್ಟವಾದ ಅನುದಾನ ನೀಡಿ ವಿಜೃಂಭಣೆಯಿAದ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಅನುದಾನ ಇನ್ನು ಬಾರದಿರುವುದು ಬೇಸರದ ಸಂಗತಿ. ಸಂಬAಧಿಸಿದವರು ಆದಷ್ಟು ಬೇಗ ಇತ್ತ ಕಡೆ ಗಮನ ಹರಿಸಿ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಸಾಧ್ಯವಾದಷ್ಟು ಬೇಗ ಅನುದಾನ ಬಿಡುಗಡೆಗೊಳಿಸಬೇಕು.
ವಾಮನ ಮೂರ್ತಿ ಬಿ.ಎಸ್., ಅರ್ಚಕ, ವಿರಾಜಪೇಟೆ
ಮೈಸೂರು ದಸರಾದಂತೆ ಮಡಿಕೇರಿ ದಸರಾಕ್ಕೂ ತನ್ನದೇ ಆದ ಧಾರ್ಮಿಕ ಹಿನ್ನೆಲೆ ಇದೆ. ಸರ್ಕಾರ ದಸರಾ ಅನುದಾನವನ್ನು ಬೇಗನೆ ಬಿಡುಗಡೆ ಮಾಡಿದರೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಗಳನ್ನ ಮಾಡಿಕೊಳ್ಳಬಹುದು. ಪ್ರವಾಸಿಗರು ಬರುತ್ತಾರೆ. ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಬೇಕು.
ಮನೋಹರ್, ಕೃಷಿಕ, ಯಡೂರು ಗ್ರಾಮ, ಸೋಮವಾರಪೇಟೆ
ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ದಿನಗಣನೆ ಆರಂಭವಾಗಿದ್ದು ದಸರಾ ಸಮಿತಿ ಉತ್ತಮ ಅನುದಾನವನ್ನು ನಿರೀಕ್ಷಿಸಿದೆ. ಆದಷ್ಟು ಬೇಗ ಸಮಿತಿ ಅನುದಾನವನ್ನು ಪಡೆಯಲಿ.
ದಸರಾ ಅದ್ಧೂರಿ, ಆಡಂಬರಕ್ಕಿAತ ಸಾಂಪ್ರದಾಯಿಕವಾಗಿ ನಡೆಯುವುದು ಮುಖ್ಯ. ಅಂತೆಯೇ ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ಕೊಟ್ಟರೆ ದಸರಾ ಮತ್ತಷ್ಟು ಜನ ಮನ್ನಣೆ ಪಡೆಯಲಿದೆ.
ಬಾಕಿಲನ ವನಿತಾ ವಿಜಯಕುಮಾರ್, ಹಾಕಿಪಟು, ಕೊಡಂಬೂರು
ಸರ್ಕಾರ ಇನ್ನೂ ಅನುದಾನ ನಿಗದಿ ಮಾಡದಿರುವುದರಿಂದ ಸಿದ್ದತೆಗಳಿಗೆ ತೊಡಕಾಗಿದೆ. 9 ದಿನಗಳ ಸಾಂÀಸ್ಕೃತಿಕ ಕಾರ್ಯಕ್ರಮಕ್ಕೆ ನಮ್ಮ ಸಮಿತಿ ಈಗಾಗಲೇ ತಯಾರಿ ನಡೆಸಿದ್ದು, ಕಲಾವಿದರಿಂದ ಅರ್ಜಿಗಳೂ ಬಂದಿದೆ. ಆದರೆ ಅನುದಾನದ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಕಲಾವಿದರಿಗೆ ಸಂಭಾವನೆ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿಯ ದಸರಾಕ್ಕೆ ಇನ್ನಷ್ಟು ವಿನೂತನ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಲು ಶಾಸಕ ಡಾ. ಮಂತರ್ ಗೌಡ ಸಲಹೆ ನೀಡಿದ್ದಾರೆ. ಸರ್ಕಾರದ ಅನುದಾನ ನೋಡಿಕೊಂಡು ಈ ಬಾರಿಯ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು.
ಎಚ್.ಟಿ. ಅನಿಲ್, ಅಧ್ಯಕ್ಷ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ
ಮೈಸೂರು ದಸರಾಕ್ಕೆ ಸಂಬAಧಿಸಿದAತೆ ಸರ್ಕಾರ ಮುತುವರ್ಜಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಕ್ಕೆ ಸಂಬAಧಿಸಿದAತೆ ಇನ್ನೂ ಸರಿಯಾದ ಪೂರ್ವ ತಯಾರಿ ನಡೆದಂತಿಲ್ಲ. ದಸರಾಕ್ಕೆ ಸರ್ಕಾರದಿಂದ ಬರುವ ಅನುದಾನದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಹಾಗಾಗಿ ದಸರಾ ಸಿದ್ಧತೆಯೇ ಗೊಂದಲದಿAದ ಕೂಡಿರುವಂತೆ ಕಂಡುಬರುತ್ತಿದೆ.
ಭುವನೇಶ್ವರಿ ಹರೀಶ್, ಮಾಜಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಶನಿವಾರಸಂತೆ
ಮಡಿಕೇರಿ ದಸರಾಕ್ಕೆ ನಿರೀಕ್ಷಿತ ಅನುದಾನ ತರುವ ಪ್ರಯತ್ನ ನಡೆದಿದೆ. ಕಳೆದ ಬಾರಿಯಂತೆ ಉತ್ತಮ ಮೊತ್ತದ ಅನುದಾನವೇ ಸಿಗುತ್ತದೆ. ಈ ಬಾರಿಯೂ ಅದ್ದೂರಿಯಾಗಿಯೇ ದಸರಾ ಆಚರಿಸಲಾಗುವುದು. ಮಡಿಕೇರಿ ದಸರಾ ಆಚರಣೆಗೆ ಸಂಬAಧಿಸಿದAತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿದೆ. ದಸರಾದ ವಿವಿಧ ಸಮಿತಿಗಳ ಜತೆ ಸಭೆಗಳನ್ನು ನಡೆಸಿ ಕಾರ್ಯಯೋಜನೆ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ದಸರಾಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸುವಂತೆ ಎಲ್ಲಾ ಸಮಿತಿಗಳಿಗೆ ಈಗಾಗಗಲೇ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳು ಕಾರ್ಯೋನ್ಮುಖವಾಗಿದೆ. ಸದ್ಯದಲ್ಲೇ ಜಿಲ್ಲಾ ಉಸ್ತುವಾರಿ ಸÀಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಎಲ್ಲಾ ವಿಷಯಗಳನ್ನು ಚರ್ಚಿಸಲಾಗುವುದು. ವೇದಿಕೆ ನಿರ್ಮಾಣಕ್ಕೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆ ನಡೆದಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ, ಅಧ್ಯಕ್ಷ, ಮಡಿಕೇರಿ ದಸರಾ ಸಮಿತಿ