ಬೆಳಗಾವಿ ಮಹಾನಗರ ಪಾಲಿಕೆ 
ಜಿಲ್ಲೆ

ಅನರ್ಹ ಪೌರಕಾರ್ಮಿಕರ ಹೆಸರಲ್ಲಿ ವೇತನ?

ಬೆಳಗಾವಿ: ಮಹಾನಗರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸದೆ ಪ್ರತಿ ತಿಂಗಳು ವೇತನ ಪಡೆದು ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಮಾಡಿರುವ ಗುತ್ತಿಗೆದಾರರು, ಅನರ್ಹ ಪೌರ ಕಾರ್ಮಿಕರ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಮಹಾನಗರ ಪಾಲಿಕೆ ಮುಂದಾಗಿದೆ.

ಬೆಳಗಾವಿ ಪಾಲಿಕೆ ದಾಖಲೆಗಳ ಪ್ರಕಾರ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾಯಂ, ನೇರ ಪಾವತಿ, ಗುತ್ತಿಗೆ ಆಧಾರಿತರು ಸೇರಿ 1318 ಕಾರ್ಮಿಕರು ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ಆದರೆ, ಹಿಂದಿನ ಅವಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 689 ಪೌರ ಕಾರ್ಮಿಕರು ಪ್ರತಿದಿನ ಸ್ವಚ್ಛತಾ ಕೆಲಸ ಮಾಡುತ್ತಿದ್ದರು ಎಂದು ಮಾಸಿಕ ವೇತನ ನೀಡಲಾಗಿದೆ. ವಾಸ್ತವದಲ್ಲಿ ಎಷ್ಟು ಜನರು ಮಾಡುತ್ತಿದ್ದಾರೆಂಬುದು ಅಕೃತ ಮಾಹಿತಿ ಲಭ್ಯವಾಗುತ್ತಿಲ್ಲ. ಅಲ್ಲದೆ, ಕೆಲ ಗುತ್ತಿಗೆದಾರರು ತಮ್ಮ ಕುಟುಂಬ ಸದಸ್ಯರು ಸೇರಿ 200ಕ್ಕೂ ಅಕ ಜನರ ಹೆಸರಿನಲ್ಲಿ ಮಾಸಿಕ ವೇತನ ತೆಗೆದಿದ್ದಾರೆ. ಕೆಲವೆಡೆ ಪೌರ ಕಾರ್ಮಿಕರು ಇಲ್ಲದಿದ್ದರೂ ವೇತನ ಪಾವತಿಯಾಗುತ್ತಿದೆ. ಮೇಲ್ನೋಟಕ್ಕೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಲೋಕಾಯುಕ್ತ ಇಲ್ಲವೆ ನಿವೃತ್ತ ನ್ಯಾಯಾೀಶರ ನೇತೃತ್ವದಲ್ಲಿ ತನಿಖೆ ವಹಿಸುವ ಕುರಿತು ಚರ್ಚಿಸಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಸದಸ್ಯರು ತಿಳಿಸಿದ್ದಾರೆ.

ಹೊಸ ನಿಯಮ ಪ್ರಕಾರ ಸ್ವಚ್ಛತಾ ಕೆಲಸಕ್ಕಾಗಿ ಹೊಸದಾಗಿ ಆರು ಗುತ್ತಿಗೆ ಪ್ಯಾಕೇಜ್ ನೀಡಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಶೇ.25 ಹೆಚ್ಚುವರಿ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಎಲ್ಲ ವಾರ್ಡ್‌ಗಳ ಜನಸಂಖ್ಯೆ ಅನುಗುಣವಾಗಿ 300ಕ್ಕೂ ಅಕ ಪೌರ ಕಾರ್ಮಿಕರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛತಾ ವಾಹನಗಳಿಗೆ ಪ್ರತ್ಯೇಕವಾಗಿ ಚಾಲಕರನ್ನು ನೇಮಿಸಬೇಕೆಂಬ ನಿಯಮವಿದೆ. ಆದರೆ, ಹಿಂದಿನ ಗುತ್ತಿಗೆದಾರರು ಪೌರ ಕಾರ್ಮಿಕರನ್ನೇ ವಾಹನ ಚಾಲಕರನ್ನಾಗಿ ಬಳಸುತ್ತಿದ್ದರು. ಈಗ ಅದೆಕ್ಕೆ ಕಡಿವಾಣ ಹಾಕಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕಾಲ ಸ್ವಚ್ಛತಾ ಕೆಲಸದಲ್ಲಿರುವ ಅರ್ಹ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಇಎಸ್‌ಐ, ಪಿಎ್ ಸೌಲಭ್ಯ ಕಲ್ಪಿಸದಿರುವುದು ಬೆಳಕಿಗೆ ಬಂದಿದೆ. ಸ್ವಚ್ಛತಾ ಗುತ್ತಿಗೆ ಪ್ಯಾಕೇಜ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇದರಲ್ಲಿ ಪಾಲಿಕೆ ಹಿರಿಯ, ಕಿರಿಯ ಅಕಾರಿಗಳೂ ಭಾಗಿಯಾಗಿದ್ದಾರೆ. ಹೀಗಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ನಷ್ಟದ ಹಣ ವಾಪಸ್ ವಸೂಲಿ ಮಾಡಲು ಕ್ರಮ ವಹಿಸಲು ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ.

ಸ್ವಚ್ಛತಾ ಕಾರ್ಮಿಕರಲ್ಲಿ 120ಕ್ಕೂ ಅಕ ಪೌರ ಕಾರ್ಮಿಕರು ವಾಹನ ಚಾಲನೆ ಸೇರಿ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಕೆಲವರು ಕೆಲಸಕ್ಕೆ ಬಾರದಿದ್ದರೂ ಪ್ರತಿ ತಿಂಗಳು ವೇತನ ಪಡೆಯುತ್ತಿದ್ದಾರೆ. ಇದು ಸ್ವಚ್ಛತಾ ಕೆಲಸದ ಮೇಲೆ ಪರಿಣಾಮ ಉಂಟು ಮಾಡಿದೆ. ಗುತ್ತಿಗೆ ಪಡೆದಿರುವವರು ಪೌರ ಕಾರ್ಮಿಕರ ಬಗ್ಗೆ ತಪ್ಪು ಅಂಕಿ ಸಂಖ್ಯೆ ನೀಡುತ್ತಿದ್ದಾರೆ. ಬಹುತೇಕ ಕಡೆ ಹಾಜರಾತಿ ಹಾಕುವ ಸ್ವಚ್ಛತಾ ಸಿಬ್ಬಂದಿ ವಾಸ್ತವದಲ್ಲಿ ಇರುವುದಿಲ್ಲ. ಇದಕ್ಕೆ ಕಡಿವಾಣ ಹಾಕಲು ಎನ್‌ಎಂಎಂಎಸ್ ಇ-ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಸ್ವಚ್ಛತಾ ಕೆಲಸ ಮಾಡದಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅವರ ಹೆಸರಿನಲ್ಲಿ ವೇತನ ಪಾವತಿಯಾಗಿದೆ.ಇದನ್ನು ಪರಿಶೀಲನೆ ನಡೆಸುವಂತೆ ಸದಸ್ಯರು ದೂರಿದ್ದಾರೆ. ಹೀಗಾಗಿ ಎಲ್ಲ ಪೌರ ಕಾರ್ಮಿಕರ ಹಾಜರಾತಿ, ಪಿಎ್, ಇಎಸ್‌ಐ ಸೇರಿ ಸಂಬಂಧಪಟ್ಟ ಎಲ್ಲ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಈ ಕುರಿತು ತನಿಖೆ ನಡೆಸಲು ಕ್ರಮ ವಹಿಸಲಾಗಿದೆ. | ಶುಭ ಬಿ. ಪಾಲಿಕೆ ಆಯುಕ್ತೆ