ದಮ್ಮನಿಂಗಳ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಡಿ.ಜೆ.ರಾಮಕೃಷ್ಣ, ಉಪಾಧ್ಯಕ್ಷೆ ಐ.ಕೆ.ಪುಷ್ಪಾ ರಾಮಕೃಷ್ಣಾಚಾರ್ ಅವರನ್ನು ಅಭಿನಂದಿಸಲಾಯಿತು. 
ಜಿಲ್ಲೆ

ದಮ್ಮನಿಂಗಳ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ

ಶ್ರವಣಬೆಳಗೊಳ: ಹೋಬಳಿಯ ದಮ್ಮನಿಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಡಿ.ಜೆ.ರಾಮಕೃಷ್ಣ ಹಾಗೂ ಉಪಾಧ್ಯಕ್ಷೆಯಾಗಿ ಐ.ಕೆ.ಪುಷ್ಪಾ ರಾಮಕೃಷ್ಣಾಚಾರ್ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದರು.

ಕೆ.ಆರ್.ಅನಂತ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.ಜೆ.ರಾಮಕೃಷ್ಣ ಹಾಗೂ ಖಾಲಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಐ.ಕೆ.ಪುಷ್ಪಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹರೀಶ್ ಅವಿರೋಧ ಆಯ್ಕೆ ಪ್ರಕಟಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಎಲ್ಲ ಸದಸ್ಯರ ಪರಸ್ಪರ ಸಹಕಾರದಿಂದ ಉತ್ತಮ ಕೆಲಸ ಮಡುವ ಮೂಲಕ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಹೇಳಿದರು.

ಕುಡಿಯುವ ನೀರು, ರಸ್ತೆ, ಬೀದಿದೀಪ, ಒಳಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಲು ಬದ್ಧರಾಗಿದ್ದೇವೆ ಎಂದರು.

ಮಾಜಿ ಅಧ್ಯಕ್ಷ ಕೆ.ಆರ್.ಅನಂತ, ಸದಸ್ಯರಾದ ಭವ್ಯಾ ಚಂದ್ರಶೇಖರ್, ಎ.ಎಸ್.ಮೋಹನ್‌ಕುಮಾರ್, ಕೆ.ಎಂ.ಶಂಕರ್, ಎಚ್.ಕೆ. ಬಲರಾಂ, ಅಬ್ದುಲ್ ಗಪೂರ್, ಭವ್ಯಾ ಪ್ರಕಾಶ್, ಕಲ್ಯಾಣಮ್ಮ ನಂಜಪ್ಪ, ಶಕುಂತಲಾ ದೇವರಾಜ್, ಗಾಯತ್ರಿ ಶೇಖರ್, ಸಾವಿತ್ರಿ ರುಕ್ಕೇಶ್, ಮಾಜಿ ಸದಸ್ಯೆ ರಕ್ಷಿತಾ ನಿಂಗರಾಜು, ಮುಖಂಡರಾದ ಶಿಲ್ಪಾ ಶ್ರೀನಿವಾಸ್, ಮೀನಾಕ್ಷಿ ಬಸವರಾಜ್, ಶಿವರಾಂ, ಕುಮಾರ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಎಂ.ರವಿ ಇತರರಿದ್ದರು.