ಕೆದಮುಳ್ಳುರು ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು. 
ಜಿಲ್ಲೆ

ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ವಿರಾಜಪೇಟೆ: ಸಮೀಪದ ಕೆದಮುಳ್ಳೂರು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ 2024-29ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕರಿನೆರವಂಡ ಎನ್.ಅಯ್ಯಪ್ಪ ಹಾಗೂ ಉಪಾಧ್ಯಕ್ಷರಾಗಿ ಪಟ್ರಪಂಡ ಪ್ರಿನ್ಸ್ ಮೊಣ್ಣಪ್ಪ ಇತ್ತೀಚೆಗೆ ಅವಿರೋಧ ಆಯ್ಕೆಯಾದರು.

ಅಧ್ಯಕ್ಷ ಅಯ್ಯಪ್ಪ ಮಾತನಾಡಿ, ಸಂಘದ ಏಳಿಗೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಅಗತ್ಯ. ಸಂಘ ಉತ್ತಮವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಅವಿರೋಧ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದಿಸಲಾಯಿತು. ನೂತನ ಆಡಳಿತ ಮಂಡಳಿ ಸದಸ್ಯರಾಗಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕೋಡಿರ ಚಂಗಪ್ಪ, ಮಾಳೇಟಿರ ಎನ್.ಉತ್ತಪ್ಪ, ಮಾಳೇಟಿರ ಮುದ್ದಯ್ಯ, ಸಾಲಗಾರ ಮಹಿಳಾ ಮೀಸಲಿನಿಂದ ಕರಿನೆರವಂಡ ಎ.ರತಿ, ಚಂಗಚಂಡ ಸಿ.ಅಕ್ಕಣಿ, ಸಾಲಗಾರ ಹಿಂದುಳಿದ ವರ್ಗ ಪ್ರವರ್ಗ ‘ಎ’ ಮೀಸಲಿನಿಂದ ಮೀತಲತಂಡ ವೈ.ಅಲಿ, ಸಾಲಗಾರ ಹಿಂದುಳಿದ ವರ್ಗ ಪ್ರವರ್ಗ ‘ಬಿ’ಯಿಂದ ಮಾಳೇಟಿರ ಎಸ್.ಸುಬ್ಬಯ್ಯ, ಸಾಲಗಾರ ಪರಿಶಿಷ್ಟ ಜಾತಿ ಮೀಸಲಿನಿಂದ ಎಚ್.ಆರ್.ಉಮೇಶ್, ಸಾಲಗಾರ ಪರಿಶಿಷ್ಟ ಪಂಗಡ ಮೀಸಲಿನಿಂದ ಎಂ.ಎಂ.ಪರಮೇಶ್ವರ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಮಾತಂಡ ಎಸ್.ಚಂಗಪ್ಪ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿ ಆಶಾ ಅವಿರೋಧ ಆಯ್ಕೆ ಘೋಷಿಸಿದರು. ಮೇಲ್ವಿಚಾರಕರಾಗಿ ಕೇಂದ್ರ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿ ಕೀರ್ತನ್, ಕೆದಮುಳ್ಳೂರು ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಾಹಣಾಧಿಕಾರಿ ಗೌತಮ್ ಇದ್ದರು.