ಕಾನಹೊಸಹಳ್ಳಿ ಸಮೀಪದ ಹಿರೇಕುಂಬಳಗುಂಟೆ ಗ್ರಾಪಂಗೆ ಚಂದ್ರಮ್ಮ ಅಧ್ಯಕ್ಷೆ, ದುರುಗಮ್ಮ ಉಪಾಧ್ಯಕ್ಷೆಯಾಗಿ ಆವಿರೋಧ ಆಯ್ಕೆಯಾದರು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪಿಡಿಒ ನಿಂಗಪ್ಪ, ಕಾರ್ಯದರ್ಶಿ ಕೊಟ್ರೇಶ ಇದ್ದರು 
ಜಿಲ್ಲೆ

ಅಧ್ಯಕ್ಷೆ-ಉಪಾಧ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆ

ಕಾನಹೊಸಹಳ್ಳಿ: ಹಿರೇಕುಂಬಳಗುಂಟೆ ಗ್ರಾಪಂಗೆ ಗ್ರಾಮದ ಚಂದ್ರಮ್ಮ ಅಧ್ಯಕ್ಷೆ, ಬಯಲುತುಂಬರಗುದ್ದಿ ದುರುಗಮ್ಮ ಉಪಾಧ್ಯಕ್ಷೆಯಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಗ್ರಾಮದ ಚಂದ್ರಮ್ಮ, ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಯಲುತುಂಬರಗುದ್ದಿ ದುರುಗಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅವಿರೋಧ ಆಯ್ಕೆಯಾದರು ಎಂದು ಕೂಡ್ಲಿಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ತಿಳಿಸಿದರು. ಒಟ್ಟು 23 ಸದಸ್ಯರಿದ್ದು, ಎಲ್ಲರೂ ಹಾಜರಾಗಿದ್ದರು. ತಹಸೀಲ್ದಾರ್ ನೇತ್ರಾವತಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವೃದ್ಧಾಪ್ಯ ವೇತನ ಸೇರಿ ಕಂದಾಯ ಇಲಾಖೆಯ ವಿವಿಧ ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಸದಸ್ಯರಾದ ರಾಧಾ, ಬಸಮ್ಮ, ಸಿದ್ದಣ್ಣ, ಮೂಗಪ್ಪ, ಗಂಗಮ್ಮ, ಗಿರೀಶ, ಸಿದ್ದಪ್ಪ , ಮಹಾಂತಮ್ಮ, ದುರುಗೇಶ, ಕಾಶಿಗೌಡ, ಮೂಗಣ್ಣ, ಬಸವರಾಜ, ಗಂಗಮ್ಮ, ಮಂಜಮ್ಮ ಇತರರಿದ್ದರು.