ರಟ್ಟಿಹಳ್ಳಿ: ತಾಲೂಕಿನ ಕೃಷಿಕ ಸಮಾಜಕ್ಕೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಂಗಳಗೊಂದಿ ಗ್ರಾಮದ ರೇವಣಪ್ಪ ಚನ್ನಬಸಪ್ಪ ತಂಬಾಕದ, ಉಪಾಧ್ಯಕ್ಷರಾಗಿ ನೇಶ್ವಿ ಗ್ರಾಮದ ಶಿವಪ್ಪ ಕಣಕೊಟಗಿ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ರಟ್ಟಿಹಳ್ಳಿಯ ರುದ್ರಪ್ಪ ಬೆನ್ನೂರ, ಖಜಾಂಚಿಯಾಗಿ ಶಿರಗಂಬಿ ಗ್ರಾಮದ ಮಲ್ಲನಗೌಡ ಸೊರಟೂರ, ಜಿಲ್ಲಾ ಪ್ರತಿನಿಯಾಗಿ ಕುಡಪಲಿ ಗ್ರಾಮದ ಕರಬಸಪ್ಪ ಕುಸಗೂರ ಆಯ್ಕೆಯಾದರು. ತಾಲೂಕಿನ ಕೃಷಿಕ ಸಮಾಜದ ತಾಲೂಕು ಕಾರ್ಯಕಾರಿ ಸಮಿತಿ 14 ಸ್ಥಾನಗಳಿಗೆ ಇತ್ತೀಚೆಗೆ ಅವಿರೋಧವಾಗಿ ಆಯ್ಕೆ ನಡೆದಿತ್ತು. ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ, ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಂದ್ರ ಕುಸಗೂರ, ಅಶೋಕ ಕುಲಕರ್ಣಿ, ವೀರಬಸಪ್ಪ ಮುದಿಗೌಡ್ರ, ಶಿವಲಿಂಗಪ್ಪ ಬೆನಕನಕೊಂಡ, ಮಲ್ಲಿಕಾರ್ಜುನ ಪುಟ್ಟಪ್ಪಗೌಡ್ರ, ಚಂದ್ರಪ್ಪ ಮಳಗೊಂಡರ, ಶಂಕ್ರಪ್ಪ ಪುಟ್ಟಳವರ, ಆನಂದರಾವ್ ಮಗದೂರ, ಶಿವಾನಂದಪ್ಪ ಬಸಲೀಹಳ್ಳಿ ಇದ್ದರು.