ಮದ್ದೂರು ತಾಲೂಕಿನ ಸೋಮನಹಳ್ಳಿಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಾಯಿತ್ರಿ ಅವಿರೋಧವಾಗಿ ಆಯ್ಕೆಯಾದರು. ಐಶ್ವರ್ಯಾ, ಸಿ.ಟಿ.ಶಂಕರ್, ಸಾವಿತ್ರಿ, ಎಸ್.ಬಿ.ಸತ್ಯಭಾಮಾ, ಅಪೂರ್ವ, ಟಿ.ಸಿ.ಪ್ರೀತಮ್, ಎಸ್.ಪ್ರವೀಣ್, ಎಚ್.ಎಸ್.ಅನಿತಾ, ಸ್ವಾಮಿ, ಟಿ.ಆರ್.ನಂದೀಶ, ಗೀತಾ, ಶಂಕರ, ಎಂ.ಸಿ.ಸರಸ್ವತಿ, ಸುಜಾತಾ, ಕೆ.ಸಿ.ಹನುಮೇಗೌಡ, ಸಿ.ಕುಮಾರ್, ಕೆ.ಜಿ.ರೇಣುಕಾ ಇದ್ದರು. 
ಜಿಲ್ಲೆ

ಸೋಮನಹಳ್ಳಿ ಗ್ರಾಪಂಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮದ್ದೂರು: ತಾಲೂಕಿನ ಸೋಮನಹಳ್ಳಿಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಾಯತ್ರಿ ಅವಿರೋಧವಾಗಿ ಆಯ್ಕೆಯಾದರು.

ಸಾವಿತ್ರಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಗಾಯತ್ರಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ತಾಪಂ ಇಒ ರಾಮಲಿಂಗಯ್ಯ ಘೋಷಣೆ ಮಾಡಿದರು.

ನೂತನ ಅಧ್ಯಕ್ಷೆ ಗಾಯತ್ರಿ ಮಾತನಾಡಿ, ಪಂಚಾಯಿತಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಗ್ರಾಪಂಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರವಿಸುತ್ತೇನೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುತ್ತೆನೆಂದು ಭರವಸೆ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ಕೆ.ಐಶ್ವರ್ಯಾ, ಸದಸ್ಯರಾದ ಸಿ.ಟಿ.ಶಂಕರ್, ಸಾವಿತ್ರಿ, ಎಸ್.ಬಿ.ಸತ್ಯಭಾಮಾ, ಅಪೂರ್ವ, ಟಿ.ಸಿ.ಪ್ರೀತಮ್, ಎಸ್.ಪ್ರವೀಣ್, ಎಚ್.ಎಸ್.ಅನಿತಾ, ಸ್ವಾಮಿ, ಟಿ.ಆರ್.ನಂದೀಶ, ಗೀತಾ, ಶಂಕರ, ಎಂ.ಸಿ.ಸರಸ್ವತಿ, ಸುಜಾತಾ, ಕೆ.ಸಿ.ಹನುಮೇಗೌಡ, ಸಿ.ಕುಮಾರ್, ಕೆ.ಜಿ.ರೇಣುಕಾ ಸೇರಿದಂತೆ ಇತರರು ಇದ್ದರು.