ಜಿಲ್ಲೆ

ತೆರೆಯದ ಅಂಗಡಿ ಮುಂಗಟ್ಟು

Kodagu

ಸುಂಟಿಕೊಪ್ಪ: ಲಾಕ್‌ಡೌನ್ ಹಿನ್ನೆಲೆ ಸುಂಟಿಕೊಪ್ಪ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಯಾವುದೇ ಅಂಗಡಿ ಮುಂಗ್ಗಟ್ಟು ತೆರೆಯದೆ ವಾಹನ ಸಂಚಾರವಿಲ್ಲದೆ ಲಾಕ್‌ಡೌನ್ ಯಶಸ್ವಿಯಾಯಿತು.

ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಮೀನು- ಮಾಂಸ ಮಾರಾಟ ಅಂಗಡಿಗಳಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಿದರೂ ವರ್ತಕರು ಅಂಗಡಿ ಬಾಗಿಲು ತೆರೆಯಲಿಲ್ಲ. ವಾಹನ ಹಾಗೂ ಜನರ ಓಡಾಟವಿಲ್ಲದೆ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು.