ಹರಪನಹಳ್ಳಿ ಸ.ಪ.ಪೂ ಕಾಲೇಜು ಆಟದ ಮೈದಾನದ ಒತ್ತುವರಿ ದೂರು ಕುರಿತು ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಛಲವಾದಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಗಿರೀಶಬಾಬು, ಬಿಇಒ ಲೇಪಾಕ್ಷಪ್ಪ ಇತರರಿದ್ದರು. 
ಜಿಲ್ಲೆ

ಒತ್ತುವರಿಯಾಗಿಲ್ಲ ಆಟದ ಮೈದಾನ

ಹರಪನಹಳ್ಳಿ: ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನ ಖಾಸಗಿಯವರಿಂದ ಒತ್ತುವರಿಯಾಗಿಲ್ಲ ಎಂದು ಹೊಸಪೇಟೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಛಲವಾದಿ ಗುರುವಾರ ತಿಳಿಸಿದರು.

ಪಟ್ಟಣದ ಸ.ಪ. ಪೂ ಕಾಲೇಜು ಮೈದಾನ ಒತ್ತುವರಿಯ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ವೇಳೆ ಮಾತನಾಡಿದರು. ಆಟದ ಮೈದಾನ 5.77 ಎಕರೆ ಇದ್ದು, ಇತರ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿವೆ ಹೊರತು ಖಾಸಗಿಯವರು ಒತ್ತುವರಿ ಮಾಡಿಲ್ಲ.

ಈ ವಿಚಾರವಾಗಿ ಈ ಹಿಂದೆ ತಹಸೀಲ್ದಾರ್ ಹಾಗೂ ಬಿಇಒ ಅವರು ಒತ್ತುವರಿಯಾಗಿಲ್ಲ ಎಂದು ವರದಿ ನೀಡಿದ್ದರು. ಅವರ ವರದಿ ಸರಿಯಾಗಿದೆ ಎಂಬುದನ್ನು ಪರಿಶೀಲಿಸಲಾಗಿದೆ ಎಂದರು.