ಜಿಲ್ಲೆ

ಅಪರಿಚಿತ ವಾಹನ ಡಿಕ್ಕಿ, ಇಬ್ಬರ ಸಾವು

Belagavi

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಹತ್ತರಗಿ-ದಡ್ಡಿ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಮೃತರಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಹತ್ತರಗಿ ಗ್ರಾಮದ ಈರಣ್ಣ ಬಾಬು ತೆರಣಿ (49) ಹಾಗೂ ದಾದಬಾನಟ್ಟಿ ಗ್ರಾಮದ ಭರಮಣ್ಣ ಗುರುಸಿದ್ದ ಮಜತಿ (65) ಮೃತರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.