ದೊಡ್ಡಬಳ್ಳಾಪುರ: ನಗರ ಹೊರವಲಯದ ನಂದಿಮೋರಿ ಮೇಲ್ಸೇತುವೆ ಬಳಿ ಗುರುವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಶವಂತಪುರ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಮೃತನಿಗೆ ಸುಮಾರು 45 ವರ್ಷವಾಗಿದ್ದು, 168 ಸೆಂ.ಮೀ. ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2.5 ಇಂಚು ಉದ್ದದ ಕಪ್ಪು ತಲೆ ಕೂದಲು ಇದೆ. ಗಡ್ಡ, ಮೀಸೆ ಬಿಟ್ಟಿದ್ದು ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ವಾರಸುದಾರರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಮೊಬೈಲ್ ಸಂಖ್ಯೆ 9480802143, 9902193960, ರೈಲ್ವೆ ಪಿಎಸ್ಐ 9480802118 ಸಂಪರ್ಕಿಸಬಹುದು.