ಜಿಲ್ಲೆ

ಫಲಕಾರಿಯಾಗದ ಚಿಕಿತ್ಸೆ: ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಸಾವು

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿ ಜ.20ರಂದು ಮೃತಪಟ್ಟಿದ್ದಾನೆ.

ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತನನ್ನು ಜ.13ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಮಾರು 45 ವರ್ಷದವನಾಗಿದ್ದು, 5.5 ಅಡಿ ಎತ್ತರವಿದ್ದಾರೆ. ಬಲಗೈ ಮೇಲೆ ಎನ್‌ಬಿಎಂ ಎಂದು ಇಂಗ್ಲೀಷ್‌ನಲ್ಲಿ ಹಸಿರು ಹಚ್ಚೆ ಇದೆ. ಎಡಗೈನ ಮುಂಗೈ ಮೇಲೆ ರೇಖಾ ಹಾಗೂ ಪಕ್ಕದಲ್ಲಿ ಕೆಎಎಸ್ ಎಂದು ಹಚ್ಚೆ ಇದೆ. ಮೃತದೇಹ ಕೆ.ಆರ್.ಆಸ್ಪತ್ರೆಯಲ್ಲಿದ್ದು, ವಾರಸುದಾರರಿದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.