ಜಿಲ್ಲೆ

ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಬಸವರಾಜ ವೀರಪ್ಪ ಗರಗ

ಕಲಘಟಗಿ: ಪಟ್ಟಣದ ಮಾಚಾಪುರ ರಸ್ತೆ ಪಕ್ಕದಲ್ಲಿರುವ ಕೆಇಬಿ ಗ್ರಿಡ್ ಸಮೀಪದ ಬೇಲಿಯಲ್ಲಿ ವ್ಯಕ್ತಿಯೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 35ರಿಂದ 55 ವಯಸ್ಸಿನ ವ್ಯಕ್ತಿಯು ಬಿಳಿ ಬಣ್ಣದ ಧೋತ್ರದಿಂದ ನೇಣು ಬಿಗಿದುಕೊಂಡಿದ್ದಾನೆ. ಬಿಳಿಬಣ್ಣದ ಅಂಗಿ, ಕಡು ನೀಲಿ ಬಣ್ಣದ ಚಡ್ಡಿ ಹಾಗೂ ಬಿಳಿ ಬಣ್ಣದ ಧೋತ್ರ ಧರಿಸಿದ್ದಾನೆ. ಮೃತನ ಸಂಪೂರ್ಣ ಮಾಹಿತಿ ತಿಳಿದು ಬಂದಿಲ್ಲ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.