ಜಿಲ್ಲೆ

ರೈಲಿಗೆ ಸಿಲುಕಿ ಅಪರಿಚಿತ ಸಾವು: ಎಡಗೈ ತೋಳಿನ ಮೇಲಿದೆ 'ಪವಿತ್ರ' ಹೆಸರಿನ ಹಚ್ಚೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ-ಯಲಿಯೂರು ಮಾರ್ಗಮಧ್ಯೆ ಮಂಗಳವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಸುಮಾರು 45 ವರ್ಷದವನಾಗಿದ್ದು, 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಈತನ ಎಡಗೈ ತೋಳಿನ ಮೇಲೆ ‘ಪವಿತ್ರ’ ಎಂದು ಹಚ್ಚೆ ಇದೆ. ಮೈಮೇಲೆ ಮಾಸಲು ಹೊಂದಿರುವ ಕ್ರೀಂ ಬಣ್ಣದ ಅರ್ಧತೋಳಿನ ಟೀ ಶರ್ಟ್ ಮತ್ತು ಮಾಸಲು ಹೊಂದಿರುವ ಕಾಫಿ ಬಣ್ಣದ ಚಡ್ಡಿ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.