ಮಂಡ್ಯ: ಮದ್ದೂರು-ಹನಕೆರೆ ನಿಲ್ದಾಣದ ನಡುವೆ ಭಾನುವಾರ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಸುಮಾರು 55 ರಿಂದ 60 ವರ್ಷದವನಾಗಿದ್ದು, 5.5 ಅಡಿ ಎತ್ತರವಿದ್ದಾನೆ. ಮೃತನ ಮೈಮೇಲೆ ಆಕಾಶ ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಗ್ರೇ ಮತ್ತು ಕೆಂಪು, ನೀಲಿ ಬಣ್ಣದ ಜರ್ಕಿನ್, ನೀಲಿ ಮತ್ತು ಕೆಂಪು, ಬಿಳಿ ಚೌಕಳಿಯುಳ್ಳ ಲುಂಗಿ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.