ಮಂಡ್ಯ: ಬ್ಯಾಡರಹಳ್ಳಿ-ಯಲಿಯೂರು ಮಾರ್ಗಮಧ್ಯೆ ಸೆ.20ರಂದು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಸುಮಾರು 40 ವರ್ಷದವನಾಗಿದ್ದು, ಐದು ಅಡಿ ಎತ್ತರವಿದ್ದಾನೆ. ಸಾಧಾರಣ ಮೈಕಟ್ಟು ಹೊಂದಿರುವ ಈತನ ಎಡಗೈ ಮೇಲೆ ‘ದುರ್ಗಶ್ರೀ’ ಮತ್ತು ಲವ್ ಸಿಂಬಲ್‌ನೊಂದಿಗೆ ಆರ್‌ಎಸ್ ಎಂದು ಅಕ್ಷರವಿದೆ. ಮೃತನ ಮೈಮೇಲೆ ತಿಳಿ ನೀಲಿ ಬಣ್ಣದ ಜೀನ್ಸ್, ಕಪ್ಪು ಬಣ್ಣದ ಜರ್ಕಿನ್ ಮತ್ತು ಟೀ ಶರ್ಟ್ ಇದೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.