ಜಿಲ್ಲೆ

ರೈಲಿಗೆ ಸಿಲುಕಿ ಅಪರಿಚಿತ ಸಾವು: ಎಡಗೈ ಮೇಲಿಗೆ ಮಹಿಳೆ ಹೆಸರಿನ ಹಚ್ಚೆ

ಮಂಡ್ಯ: ಮಂಡ್ಯ-ಹನಕೆರೆ ಮಾರ್ಗದಲ್ಲಿ ಮಂಗಳವಾರ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಸುಮಾರು 55 ರಿಂದ 60 ವರ್ಷದವನಾಗಿದ್ದು, 5.6 ಅಡಿ ಎತ್ತರ, ಸಾಧಾರಣ ಶರೀರ ಮತ್ತು ಕೋಲು ಮುಖ ಹೊಂದಿದ್ದಾನೆ. ಈತನ ಎಡಗೈ ಮೇಲೆ ಉಷಾ ಎಂದು ಹಚ್ಚೆ ಇದೆ. ಮೈಮೇಲೆ ಬಿಳಿ, ಕಪ್ಪು, ಅರಿಶಿನ, ಕಾಫಿ, ಸಿಮೆಂಡ್ ಬಣ್ಣದ ಮಿಶ್ರಿತ ಗೆರೆಯುಳ್ಳ ಅರ್ಧತೋಳಿನ ಟೀ ಶರ್ಟ್, ಸಿಮೆಂಟ್ ಬಣ್ಣದ ಚಡ್ಡಿ ಧರಿಸಿದ್ದಾನೆ. ಮೃತದೇಹವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಶವಾಗಾರದಲ್ಲಿಡಲಾಗಿದ್ದು, ವಾರಸುದಾರರಿದ್ದರೆ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದು.