ಜಿಲ್ಲೆ

ಮಲಗಿದ್ದ ಸ್ಥಿತಿಯಲ್ಲಿ ಅಪರಿಚಿತ ಸಾವು

ರವಿಕುಮಾರ್ ಪಿ. ಕೆ

ಶ್ರೀರಂಗಪಟ್ಟಣ: ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಹೊರಭಾಗದ ಮಂಟಪದ ಪಡಸಾಲೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ಸುಮಾರು 65 ರಿಂದ 70 ವರ್ಷ ವಯೋಮಾನದ ಈತ ಮೈಮೇಲೆ ಬಿಳಿ ಬಣ್ಣದ ಚೌಕುಳಿ ಅಂಗಿ, ನೀಲಿ ಬಣ್ಣದ ಚೌಕುಳಿ ಲುಂಗಿ, ಕಾಫಿ ಬಣ್ಣದ ಟೋಪಿ, ಹಸಿರು ಬಣ್ಣದ ಟವೆಲ್ ಧರಿಸಿದ್ದು, ಸುಮಾರು 5 ಅಡಿ ಎತ್ತರ, ತಲೆ ಮತ್ತು ಗಡ್ಡದಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲಿವೆ. ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತನ ವಾರಸುದಾರರು ಇದ್ದಲ್ಲಿ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಮನವಿ ಮಾಡಿದ್ದಾರೆ.