RAICHUR University 
ಜಿಲ್ಲೆ

ವಿವಿಯ ಸಿಬ್ಬಂದಿಗಳಿಗಿಲ್ಲ ೪ ತಿಂಗಳ ವೇತನ! ಕುಟುಂಬ ಪೋಷಣೆಗೆ ಪರದಾಟ ಸಿಬ್ಬಂದಿ ಸಮಸ್ಯೆಯಿಂದ ವೇತನ ಬಂದಿಲ್ಲ

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ಬೇರ್ಪಟ್ಟು ರಾಯಚೂರು ವಿಶ್ವ ವಿದ್ಯಾಲಯದ ಸ್ವತಂತ್ರ‍್ಯವಾಗಿ ಕೆಲಸ ಮಾಡುತ್ತಿದೆ. ಆದರೆ ವಿಶ್ವವಿದ್ಯಾಲಯದ ಗ್ರೂಪ್ ಸಿ, ಮತ್ತು ಡಿ ಸೇರಿದಂತೆ ಭದ್ರತಾ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳ ವೇತನ ನೀಡದೆ ಇರುವುದರಿಂದ ಸಿಬ್ಬಂದಿಗಳಿಗೆ ತಮ್ಮ ಕುಟುಂಬ ಪೋಷಣೆಗೆ ತೀವ್ರ ಸಮಸ್ಯೆ ಆಗಿದೆ.

ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸ್ಥಳೀಯವಾಗಿ ದೊರೆಯಲೆಂದು ೨೦೧೭ ರಲ್ಲಿ ನೂತನ ರಾಯಚೂರು ವಿಶ್ವ ವಿದ್ಯಾಲಯವನ್ನು ಮಂಜೂರು ಮಾಡಿ,೨೦೨೧ರಲ್ಲಿ ಅಽಕೃತವಾಗಿ ವಿವಿ ಪ್ರಾರಂಭ ಮಾಡಲಾಯಿತು. ವಿವಿ ಪ್ರಾರಂಭದಿAದ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು,ಕಳೆದ ೪ ತಿಂಗಳಿAದ ವಿವಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವೇತನ ನೀಡದೆ ಇರುವುದರಿಂದ ಸಾಲ ಮಾಡಿ ಸಿಬ್ಬಂದಿಗಳು ಜೀವನ ನಡೆಸುತ್ತಿದ್ದಾರೆ.

ಎಷ್ಟು ಸಿಬ್ಬಂದಿಗಳಿಗೆ ವೇತನ ನೀಡಿಲ್ಲ

ಭದ್ರತೆ ಹೆಸರಿನಲ್ಲಿ ಮೌಲ್ಯ ಮಾಪನ,ಕಚೇರಿ ಸಹಾಯಕರು,ಭದ್ರತಾ ಸಿಬ್ಬಂದಿ, ಸೂಪರ್ ವೈಸರ್ಸ್ ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ೭೦ ಮಂದಿ ಹೊರ ಗುತ್ತಿಗೆ ಅಧಾರದಲ್ಲಿ ಕೆಲಸ ಮಾಡುತ್ತಿz್ದÁರೆ. ಸಿಎಸ್ ಪಾಸೋಡಿ ಪೌಂಡೇಶನ ಸಂಸ್ಥೆಯು ಭದ್ರತೆ ನಿರ್ವಹಣೆಯ ಟೆಂಡರ್ ಪಡೆದುಕೊಂಡಿತ್ತು. ಭದ್ರತಾ ಸಿಬ್ಬಂದಿ ಹಾಗೂ ಮೌಲ್ಯ ಮಾಪನದಲ್ಲಿ ಕೆಲಸ ಮಾಡುವವರಿಗೆ ೧೭,೫೦೦ ರೂ ಸಂಬಳ ನಿಗದಿ ಪಡಿಸಿದೆ. ಈ ಸಂಸ್ಥೆಯು ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳ ವೇತನ ಪಾವತಿ ಮಾಡಿಲ್ಲ ಎನ್ನುವುದು ಒಂದಾದದರೆ ವಿವಿಯ ಅಽÃನÀದ ಸಿಂಡಿಕೇಟ್ ಮೂಲಕ ಗ್ರೂಪ್ ಡಿ ಮತ್ತು ಸಿ ವೃಂದದಲ್ಲಿ ಒಟ್ಟು ೨೩ ಜನ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಇವರಿಗೆ ತಿಂಗಳಿಗೆ ೧೬,೧೦೦ ರೂ. ರಂತೆ ಸಂಬಳ ನೀಡುತ್ತಿದ್ದು, ಇವರಿಗೆ ಸಹ ವೇತನ ನೀಡದಿರುವುದರಿಂದ ಅನುಮಾನಕ್ಕೆ ದಾರಿ ಮಾಡಿಕೊಟ್ಟಂತಗಿದೆ.

ಏಜೆನ್ಸಿಯಿAದ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕಿದ್ದ ವಿವಿ ಆಡಳಿತ ವರ್ಗ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಏಜೆನ್ಸಿಯ ಅಽಕಾರಿಗಳು ವಿವಿ ಕಡೆ ತಿರುಗಿಯೂ ನೋಡುತ್ತಿಲ್ಲ. ವಿವಿ ಕುಲಪತಿ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಎಲ್ಲ ಸಿಬ್ಬಂದಿಗೆ ಒಟ್ಟು ೬೩.೮೧ ಲಕ್ಷಕ್ಕೂ ಹೆಚ್ಚು ಹಣ ಬರಬೇಕಿದೆ.

ವಿವಿಯಲ್ಲಿ ಎಷ್ಟು ಕಾಲೇಜುಗಳು

ರಾಯಚೂರು ಹಾಗೂ ಯಾದಗಿರಿ ಸೇರಿ ಒಟ್ಟು ೧೯೪ ಕಾಲೇಜುಗಳು ಇದ್ದು, ಇವುಗಳಿಂದ ಬರುವ ವಾರ್ಷಿಕ ಸಂಯೋಜನಾ ಶುಲ್ಕ, ವಿದ್ಯಾರ್ಥಿಗಳ ದಾಖಲಾತಿ ಅನುಮೋದನಾ ಶುಲ್ಕ, ವಿದ್ಯಾರ್ಥಿಗಳಿಂದ ಪಡೆಯುವ ಪರೀಕ್ಷಾ ಶುಲ್ಕ ಇಷ್ಟೇ ಈ ವಿವಿಯ ಆದಾಯದ ಸಂಪನ್ಮೂಲಗಳು. ಇದರಿಂದ ಬರುವ ಹಣದಲ್ಲಿ ವಿವಿಯ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರಿಗೂ ವೇತನ ನೀಡಲು ಕಷ್ಟವಾಗುತ್ತಿದೆ. ಒಬ್ಬರೂ ಕಾಯಂ ಬೋಧಕರಿಲ್ಲ. ಸರ್ಕಾರದಿಂದ ಯಾವುದೇ ಹುz್ದೆಗಳ ಮಂಜೂರಾತಿಯೂ ದೊರೆತಿಲ್ಲ ಇದರಿಂದ ಅರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಡಿ ಮತ್ತು ಸಿ ಗ್ರೂಪ್ ಸಿಬ್ಬಂದಿಗಳಿಗೆ ವೇತನ ಸಮಸ್ಯೆಯಾಗಿತ್ತು, ಸಿಬ್ಬಂದಿಗಳ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲು ನಮ್ಮಲ್ಲಿ ಸಿಬ್ಬಂದಿಗಳ ಸಮಸ್ಯೆಯಿಂದ ವೇತನ ನೀಡಿಲ್ಲ. ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು. ಇದರ ಜತೆಗೆ ಕೆಲ ಹೊರ ಗುತ್ತಿಗೆ ನೌಕರರರು ಏಜೆನ್ಸಿ ಮೂಲಕ ಕೆಲಸ ಮಾಡುತ್ತಿದ್ದು,ಇವರ ವೇತನ ನಮ್ಮ ಅಽÃನದಲ್ಲಿ ಬರುವುದಿಲ್ಲ.

ಡಾ.ಸುಯಮೀಂದ್ರ ಕುಲಕರ್ಣಿ ಹಂಗಾಮಿ ಕುಲಪತಿ ರಾಯಚೂರು ವಿವಿ