ಮೈಸೂರು: 2022-23ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್ ಹಾಗೂ ಪುರುಷರ ಖೋ-ಖೋ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾಲಯದ ತಂಡವನ್ನು ಆಯ್ಕೆ ಮಾಡಲಾಗಿದೆ.
ತಮಿಳುನಾಡು ಚೆನ್ನೈನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2022-23ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ತರಬೇತುದಾರರಾದ ಎಂ.ಪುನೀತ್, ಟಿ.ಎಸ್.ರವಿ, ತಂಡದ ವ್ಯವಸ್ಥಾಪಕ ಕೆ.ಆರ್.ಲೋಕೇಶ್ ಜತೆ ವಿವಿಯ ತಂಡ ಭಾಗಿಯಾಗಿದೆ.
ಆಂಧ್ರಪ್ರದೇಶದ ಜೆಎನ್‌ಟಿಯು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2022-23ನೇ ಸಾಲಿನ ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ತಂಡದ ವ್ಯವಸ್ಥಾಪಕ ಡಾ.ಕೆ.ಎಸ್.ಭಾಸ್ಕರ್ ಜತೆ ತಮ್ಮ ತಂಡ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ತಿಳಿಸಿದ್ದಾರೆ.