ಜಿಲ್ಲೆ

ವಿಶ್ವವಿದ್ಯಾಲಯ ಮಾದರಿಯಲ್ಲಿ ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ: ಶಾಸಕರಿಂದ ₹1.97 ಕೋಟಿ ಕಾಮಗಾರಿ ಪರಿಶೀಲನೆ

ಹರ್ಷ ನ.ಪುರೋಹಿತ
ಚಳ್ಳಕೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸುಮಾರು ₹1.97 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕಾಮಗಾರಿಯನ್ನು ಶಾಸಕ ಟಿ. ರಘುಮೂರ್ತಿ ಅವರು ಶುಕ್ರವಾರ ಪರಿಶೀಲಿಸಿದರು.

ಕಾಲೇಜನ್ನು ವಿಶ್ವವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಈ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕರು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಿದ್ದೇಶ್ ಅವರಿಗೆ ಸೂಚಿಸಿದರು.

ಸಾವಿರಾರು ವಿದ್ಯಾರ್ಥಿಗಳು ಕಲಿಯುವ ಈ ಕಾಲೇಜು ಆಕರ್ಷಣೀಯವಾಗಿ ಮತ್ತು ಇತರೆ ಕಾಲೇಜುಗಳಿಗೆ ಮಾದರಿ ಎನಿಸುವ ರೀತಿ ಅಭಿವೃದ್ಧಿ ಆಗಬೇಕಿದೆ ಎಂದು ಶಾಸಕರು ತಿಳಿಸಿದರು.

ಪರಿಶೀಲಿಸಿದ ಪ್ರಮುಖ ಅಂಶಗಳು

ಶಾಸಕರು ವಿಶೇಷ ವಿನ್ಯಾಸವುಳ್ಳ ದ್ವಾರ ಬಾಗಿಲು, ಆವರಣದಲ್ಲಿನ ರಸ್ತೆ ಅಗಲೀಕರಣ, ಚರಂಡಿ ಕಾಮಗಾರಿ ಹಾಗೂ ಅಲಂಕಾರಿಕ ಗಿಡಗಳ ತೋಟ ನಿರ್ಮಾಣ ಕೆಲಸಗಳನ್ನು ಖುದ್ದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶಶಿಧರ, ಸೇವಾದಳದ ತಿಪ್ಪೇಸ್ವಾಮಿ, ಗೌತಮ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿhttp://ಚಳ್ಳಕೆರೆ APMC: 39 ವಾಣಿಜ್ಯ ಮಳಿಗೆಗಳ ನವೀಕರಣ; ಟೆಂಡರ್ ಮೂಲಕ ಆದಾಯ ಹೆಚ್ಚಳ