ಮಡಿಕೇರಿ:
ಸ್ಥಳೀಯವಾಗಿಯೇ ಸ್ವತಂತ್ರ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆಯುವ ಜಿಲ್ಲೆಯ ಜನತೆಯ ಕನಸು ಕೊನೆಗೂ ನನಸಾಗಿದೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿದ್ದ ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ಚಟುವಟಿಕೆ ಶುರುಮಾಡಿದ್ದು, ೨೦೨೩-೨೪ ನೇ ಸಾಲಿನ ಸ್ನಾತಕೋತ್ತರ ಪದವಿಗಳಿಗಾಗಿ ಇಲ್ಲಿ ಪ್ರವೇಶಾತಿ ಪ್ರಕ್ರಿಯೆ ಆ. ೨೩ರಿಂದ ಆರಂಭವಾಗಿದೆ. ಕೊಡಗು ಮತ್ತು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ಕ್ಕೆ ತಿದ್ದುಪಡಿ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ವಿಶ್ವವಿದ್ಯಾಲಯಗಳ ಪೈಕಿ ಕೊಡಗು ವಿಶ್ವವಿದ್ಯಾಲಯ ಕೂಡ ಒಂದು. ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಇರುವ ಮಂಗಳೂರು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕೊಡಗು ವಿಶ್ವವಿದ್ಯಾಲಯ ಕಾರ್ಯಾಚರಣೆ ಶುರುಮಾಡಿದೆ. ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ಪುರು? ಮತ್ತು ಮಹಿಳೆಯರ ವಸತಿ ನಿಲಯಗಳು ಹಾಗೂ ವಸತಿಗೃಹ ಕಟ್ಟಡಗಳನ್ನು ಒಳಗೊಂಡ ಕ್ಯಾಂಪಸ್ ನೂತನ ವಿಶ್ವ ವಿದ್ಯಾಲಯದ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಿದೆ.
ದೂರದ ಊರುಗಳಿಗೆ ಹೋಗಿ ಪೋ?ಕರಿಂದ ದೂರ ಉಳಿದುಕೊಂಡು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಬಹು ಹತ್ತಿರದಲ್ಲೇ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾಲಯ ಅಧೀನದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ೯ ವ?ರ್ಗಳ ಹಿಂದೆ ಆರಂಭಿಸಲಾಗಿತ್ತು.
ಕೊಡಗು ಮಾತ್ರವಲ್ಲದೆ ದಕ್ಷಿಣ ಕನ್ನಡ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ಪಕ್ಕದ ರಾಜ್ಯಗಳಿಂದಲೂ ವಿದ್ಯಾರ್ಥಿಗಳಿಗೂ ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಕ್ಯಾಂಪಸ್ ಮತ್ತು ಕೊಡಗು ವಿಶ್ವವಿದ್ಯಾಲಯದಲ್ಲಿ ಸಂಯೋಜನೆಗೊಳಗೊಂಡ ಘಟಕ ಕಾಲೇಜು, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳಲ್ಲಿ ೨೦೨೩-೨೪ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ.
ಎಂ.ಎಸ್ಸಿ, ಎಂ.ಎ, ಎಂ.ಕಾಂ, ಎಂಎಸ್ ಡಬ್ಲ್ಯೂ, ಎಂಬಿಎ (ಟಿಟಿಎಂ) ಪಿಜಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪಿಜಿ-ಸಿಬಿಸಿಎಸ್ ಮಾತೃ ವಿಶ್ವವಿದ್ಯಾಯವಾದ ಮಂಗಳೂರು ವಿಶ್ವವಿದ್ಯಾನಿಯದ ನಿಯಮಾವಳಿಗಳಂತೆ ಅರ್ಹತೆಯ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರವೇಶಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ಜಿಲ್ಲೆಯ ಜನತೆಯ ಬಹುವರ್ಷದ ಕನಸಾಗಿದ್ದ ಸ್ವತಂತ್ರ ವಿಶ್ವವಿದ್ಯಾಲಯ ತನ್ನ ಚಟುವಟಿಕೆಗಳನ್ನು ಅಧಿಕೃತವಾಗಿ ಆರಂಭಿಸಿದಂತಾಗಿದೆ.
ಪ್ರಸ್ತುತ ಇಲ್ಲಿ ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗವಿಜ್ಞಾನ ವಿಭಾಗಗಳು, ವಾಣಿಜ್ಯಶಾಸ್ತ್ರ, ಸಮಾಜಕಾರ್ಯ, ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಕವಿಜ್ಞಾನ, ಕೊಡವ ಪ್ರೋಗ್ರಾಂಗಳು ಹಾಗೂ ಡಿಪ್ಲಮೋ ಸರ್ಟಿಫಿಕೇಟ್ ಕೋರ್ಸ್, ಡಿಪ್ಲಮೋ ಇನ್ ಯೋಗಿಕ್ ಸೈನ್ಸ್ ವಿ?ಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೂರಕ್ಕೂ ಅಧಿಕ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಲಿ ಇರುವ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ವಿಭಾಗ, ಜೀವರಸಾಯನ ಶಾಸ್ತ್ರ, ಸೂಕ್ಷ್ಮಾಣು ಜೀವ ವಿಜ್ಞಾನ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ಪರಿಸರ ವಿಜ್ಞಾನ, ಸಸ್ಯಶಾಸ್ತ್ರ ವಿಭಾಗಗಳಿಗೆ ಸಂಬಂಧಿಸದಂತೆ ಅತ್ಯಾಧುನಿಕ ಪ್ರಯೋಗಾಲಯ ವ್ಯವಸ್ಥೆ ಇರುವುದು ಹೊಸ ಕೊಡಗು ವಿಶ್ವಾವಿದ್ಯಾಲಯದ ಪಾಲಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಹತ್ತು ಸಾವಿರಕ್ಕೂ ಅಧಿಕ ಪುಸ್ತಕಗಳು, ಸಾವಿರಕ್ಕೂ ಹೆಚ್ಚು ನಿಯತಕಾಲಿಕೆಗಳು ಹಾಗೂ ಸುಸಜ್ಜಿತ ಲೈಬ್ರರಿ ನೂತನ ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ಪೂರಕವಾಗಿದೆ.
ಜೀವರಸಾಯನ ಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿದೆ. ಅಂತರಾರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳು ಕೂಡ ಪ್ರಸ್ತುತ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್‌ಡಿ ಮಹಾಪ್ರಬಂಧಗಳನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಹಾಗೆಯೇ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು ಯುಜಿಸಿ ಮತ್ತು ಇನ್ನಿತರ ಸಂಸ್ಥೆಗಳಿಂದ ಅನುದಾನ ಪಡೆದುಕೊಂಡು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಈ ಚಟುವಟಿಕೆಗಳು ಹೊಸ ವಿಶ್ವವಿದ್ಯಾಲಯಕ್ಕೆ ಅಗತ್ಯ ತಳಪಾಯ ಹಾಕಿಕೊಡುವಲ್ಲಿ ಸಹಾಯಕವಾಗುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಕೊಡಗು ವಿಶ್ವವಿದ್ಯಾಲಯದ ಚಿಕ್ಕ ಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಈ ಸಾಲಿಗೆ
ಜೀವರಸಾಯನ ಶಾಸ್ತ್ರ, ಸೂಕ್ಷ್ಮಾಣು ಜೀವವಿಜ್ಞಾನ, ಯೋಗ ವಿಜ್ಞಾನ, ರಸಾಯನ ಶಾಸ್ತ್ರ, ಗಣಕ ಯಂತ್ರ ವಿಜ್ಞಾನ, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ ಎಂ.ಎಸ್ಸಿ. ಪದವಿ, ಎಂಕಾಂ, ಎಂಎಸ್‌ಡಬ್ಲ್ಯೂ, ಕನ್ನಡ, ಕೊಡವ, ರಾಜ್ಯಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಎಂ.ಎ. ಪದವಿ, ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಲಭ್ಯವಿದೆ.
ಮಡಿಕೇರಿಯಲ್ಲಿ ಭೌತಶಾಸ್ತ್ರ ಎಂಎಸ್ಸಿ, ಎಂ.ಕಾಂ ಮತ್ತು ಎಂಬಿಎ (ಟಿಟಿಎಂ), ಕೊಡವ, ಅರ್ಥಶಾಸ್ತ್ರ ಹಾಗೂ ಇಂಗ್ಲೀ?್ ಎಂ.ಎ., ಯೋಗ ವಿಜ್ಞಾನ ಮತ್ತು ಕೊಡವ ಅಧ್ಯಯನ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಅವಕಾಶಗಳಿದೆ.
ನೂತನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರವೇಶಾತಿ ವಿವರಗಳನ್ನು ಹಾಗೂ ದಿನಾಂಕಗಳನ್ನು ಘಟಕ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರುಗಳು ತಮ್ಮ ಕಾಲೇಜಿನ ವೆಬ್‌ಸೈಟ್ ಮತ್ತು ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ. ಜತೆಗೆ ಘಟಕ ಹಾಗೂ ಕಾಲೇಜಿನ ಪಾಶುಪಾಲರು, ವಿದ್ಯಾರ್ಥಿಗಳು ಮತ್ತು ಪೋ?ಕರ ಗಮನಕ್ಕೆ ತರಲು ಸೂಚಿಸಲಾಗಿದೆ. ಎಲ್ಲಾ ಸಿದ್ಧತೆ ಮತ್ತು ಮೂಲಭೂತ ಸೌಕರ್ಯಗಳ ಜತೆಗೆ ಪ್ರಸಕ್ತ ಸಾಲಿನಿಂದಲೇ ಕೊಡಗು ವಿಶ್ವವಿದ್ಯಾಲಯದ ಚಟುವಟಿಕೆ ಆರಂಭವಾಗಿದೆ.
ಡಾ. ಸೀನಪ್ಪ, ಕುಲಸಚಿ