ಜಿಲ್ಲೆ

ವಿವಿಗಳು ಜ್ಞಾನದ ಕೇಂದ್ರ ಬಿಂದುಗಳಾಗಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವೈದ್ಯಕಿಯ ಸವಾಲುಗಳನ್ನು ಎದುರಿಸಲು ನಾವು ಅತ್ಯಂತ ಆಧುನಿಕ ಉಪಕರಣ ಮತ್ತು ಸಲಕರಣೆಗಳನ್ನು ನವೀಕರಿಸಬೇಕು. ಭಾರತದಲ್ಲಿ ತಂತ್ರಜ್ಞಾನ, ಸಂಶೋಧನೆ ಮತ್ತು ಆರೋಗ್ಯ ರಕ್ಷಣೆಯು ವಿನೂತನ ಸವಾಲುಗಳಾಗಿವೆ ಎಂದು ಮೈಸೂರಿನ ಎಸ್​ಡಿಎಂ ಇನ್​ಸ್ಟಿಟ್ಯೂಟ್​ ಫಾರ್​ ಮ್ಯಾನೇಜ್​ಮೆಂಟ್​ ಡೆವಲಪ್​ಮೆಂಟ್​ ಮಾಜಿ ನಿರ್ದೇಶಕ ಡಾ. ಎನ್​. ಆರ್​. ಪರಶುರಾಮನ್​ ಹೇಳಿದರು.

ನಗರದ ಎಸ್​ಡಿಎಂ ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿವಿಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರ ಬಿಂದುವಾಗಿರಬೇಕು. ಆ ರೀತಿ ಕಾರ್ಯ ನಿರ್ವಹಿಸುತ್ತಿರುವ ಎಸ್​ಡಿಎಂ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು, ರೋಗಿಗಳನ್ನು ಗುಣಪಡಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.

ಎಸ್​ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ್​ ಕುಮಾರ ಮಾತನಾಡಿ, ಎಸ್​ಡಿಎಂ ವಿಶ್ವವಿದ್ಯಾಲಯವು ಉತ್ತಮ ವೈದ್ಯರನ್ನು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಮಾಜ ಸೇವೆಗೆ ಒದಗಿಸಲು ಸದಾ ಸಿದ್ಧವಾಗಿದೆ. ಕಲ್ಪನೆ ಮತ್ತು ಸೃಜನಶೀಲತೆ ಜಗತ್ತನ್ನು ಬದಲಾಯಿಸಬಹುದು ಎಂದರು.

ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಆಡಳಿತಾಧಿಕಾರಿ ಸಾಕೇತ ಶೆಟ್ಟಿ, ಸಹ ಉಪ ಕುಲಪತಿ ಜೀವಂಧರ ಕುಮಾರ, ಇತರರು ಇದ್ದರು. ಡಾ. ಚಿದೇಂದ್ರ ಶೆಟ್ಟರ ವರದಿ ಮಂಡಿಸಿದರು. ವಿ.ಜಿ. ಸ್ವಾಗತಿಸಿದರು. ಡಾ. ಮಯೂರಿ ಸಾವಂತ ನಿರೂಪಿಸಿದರು. ಡಾ. ಪ್ರಸನ್ನ ದೇಶಪಾಂಡೆ ವಂದಿಸಿದರು.