ಬೆಂಗಳೂರು: ಇಂದಿನ ವಿಶ್ವವಿದ್ಯಾಲಯಗಳು ಸರ್ಕಾರದ ಪ್ರಚಾರ ಸಾಧನಗಳಾಗಿ ರೂಪಾಂತರಗೊಳ್ಳುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ರಚನೆಯ "ಹುಡುಕಾಟ' ಸಂಶೋಧನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ನಿರೂಪಿಸುವ ಮೂಲಕವಷ್ಟೇ ನಿರೀಕ್ಷಿತ ಫಲಿತಾಂಶ ದೊರಕಲು ಸಾಧ್ಯ. ಬಹುತೇಕ ವಿವಿಗಳು ಪ್ರಚಾರ ಸಾಧನಗಳಾಗಿ ಬದಲಾಗುತ್ತಿವೆ. ಇದು ಸರಿಯಲ್ಲ. ಬಹುತ್ವದ ಸಂಸತಿಯುಳ್ಳ ನಮ್ಮ ದೇಶ, ಇಂದು ಬೌದ್ಧಿಕವಾಗಿ ಮರುಭೂಮಿಯಾಗುತ್ತಿದೆ. ಪಾರಂಪಾರಿಕ ರಾಜಸ್ವ, ಧಾರ್ಮಿಕ ಜಡ್ಡುಗಳಿಂದ ನಮಗೆ ಬಿಡುಗಡೆ ನೀಡಿರುವ ಸಂವಿಧಾನವೇ ನಮ್ಮನ್ನು ಮುನ್ನಡೆಸಬಹುದಾದ ಏಕೈಕ ಭರವಸೆಯಾಗಿದೆ. ಈ ಹಿನ್ನೆಲೆ ಸಮರ್ಥ ಸಂಶೋಧನಾತ್ಮಕ ಚಟುವಟಿಕೆಗಳು ಮಾತ್ರ ಸಂವಿಧಾನದ ಆಶಯವನ್ನು ಬಲಪಡಿಸಬಲ್ಲವು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನುಸರಿಸಲಾಗುತ್ತಿರುವ ಪರೀಕ್ಷಾ ಪ್ರಕ್ರಿಯೆಗಳು ವಿದ್ಯಾರ್ಥಿಗಳ ಸಂಶೋಧನಾ ಮನಸ್ಥಿತಿಯನ್ನು ಕಸಿದುಕೊಳ್ಳುತ್ತಿದೆ. ಬರವಣಿಗೆ, ಓದಿನ ಸಂಭ್ರಮವನ್ನು ಇಂದಿನ ವಿದ್ಯಾರ್ಥಿಗಳು ಕಂಡುಕೊಳ್ಳಬೇಕು. ಸಂಶೋಧನೆ ಎಂದರೆ ಸತ್ಯದ ಹುಡುಕಾಟ. ಆದರೆ, ಇಂದಿನ ಸಮಾಜಕ್ಕೆ ಸತ್ಯದ ಅವಶ್ಯಕತೆ ದೂರವಾಗುತ್ತಿದ್ದು, ಸಂಶೋಧಕರಿಗೆ ಆತಂಕದ ವಾತಾವರಣವಿದೆ. ಲೋಕದೃಷ್ಟಿ ಇಲ್ಲದ ದೇಶ, ಸಾಹಿತ್ಯಗಳಿಗೆ ಭವಿಷ್ಯವಿಲ್ಲ. ಹೊರ ಬರಬೇಕಾದರೆ ಸತ್ಯದ ಸಂಶೋಧನಾತ್ಮಕ ಕೆಲಸಗಳು ಮುಖ್ಯ. ಬಿಳಿಮಲೆ ಅವರ ಕೃತಿ ನಿರ್ಭೀತಿಯಿಂದ ಸತ್ಯವನ್ನು ಪ್ರತಿಪಾದಿಸುವುದು ಈ ದೃಷ್ಟಿಕೋನದಿಂದ ಅತ್ಯಂತ ಅಭಿನಂದನೀಯವಾದ ಸಂಗತಿ ಮಾಜಿ ಸಿಎಂ ವಿವರಿಸಿದರು.
ಪತ್ರಕರ್ತ ಚ.ಹ.ರುನಾಥ, ಹಿರಿ ಸಂಶೋಧಕ ಡಾ.ಹಂಪ ನಾಗರಾಜಯ್ಯ ಕೃತಿ ಕುರಿತು ಮಾತನಾಡಿದರು. ದೆಹಲಿ ಮಿತ್ರದ ವಸಂತ ಶೆಟ್ಟಿ ಬೆಳ್ಳಾರೆ, ಚಿರಂತನ ಪ್ರಕಾಶನದ ಎಚ್. ಪರಮೇಶ್ವರ್ ಮತ್ತಿತರರಿದ್ದರು.
ಪ್ರಸ್ತುತ ಕಾಲಟ್ಟಕ್ಕೆ ಅನುಗುಣವಾಗಿ ರೂಪುಗೊಳ್ಳದಿದ್ದರೆ ಸಂಶೋಧನೆಯು ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತದೆ. ಇಂದಿನ ಸಾಮಾಜಿಕ ಸ್ಥಿತ್ಯಂತರಗಳು ಇತಿಹಾಸವನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿವೆ. ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಉತ್ಸುಕವಾಗಿರುವ ಕಾರಣ ಸಂಶೋಧನೆಗೆ ಭರವಸೆಯೇ ಇಲ್ಲದ ವಾತಾವರಣ ಮೂಡಿದೆ. ಸಂಶೋಧನೆಯ ಮೂಲಕ ನಮ್ಮ ಸಂಸತಿಯನ್ನು ಮರುಕಟ್ಟಲು ವಿಫಲರಾದರೆ ಅದು ನಮ್ಮ ಕಾಲಟ್ಟದ ಅತಿದೊಡ್ಡ ದುರಂತ.
| ಡಾ. ಪುರುಷೋತ್ತಮ ಬಿಳಿಮಲೆ, ಸಂಶೋಧಕ