ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಏಕತಾ ನಡಿಗೆ ಕಾರ್ಯಕ್ರಮ ಜರುಗಿತು. ಮಾಜಿ ಶಾಸಕ ಪ್ರೀತಂ.ಜೆ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ನೇತ್ರಾವತಿ ಇತರರಿದ್ದರು. 
ಜಿಲ್ಲೆ

ಹಾಸನದಲ್ಲಿ ಏಕತಾ ನಡಿಗೆ

ಲೋಕೇಶ್ ಮನು. ಡಿ

ಹಾಸನ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಏಕತಾ ನಡಿಗೆ ಕಾರ್ಯಕ್ರಮ ನೆರವೇರಿತು. ಜಿಲ್ಲಾ ಬಿಜೆಪಿ ಕಚೇರಿಯಿಂದ ಆರಂಭವಾದ ನಡಿಗೆ ಆರ್.ಸಿ ರಸ್ತೆ, ಬಿ.ಎಂ ರಸ್ತೆ ಮಾರ್ಗವಾಗಿ ನಗರದ ಹೇಮಾವತಿ ಪ್ರತಿಮೆವರೆಗೆ ಸಾಗಿತು. ಕಾರ್ಯಕರ್ತರು ‘ಏಕತಾ ಶಕ್ತಿಯೇ ನಮ್ಮ ಬಲ’ ಎಂದು ಘೋಷಣೆ ಕೂಗಿ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ, ದೇಶದ ಅಖಂಡತೆಗೆ ಜೀವ ತುಂಬಿದ ಪಟೇಲ್ ಅವರ ತ್ಯಾಗ ಮತ್ತು ದೃಢ ಸಂಕಲ್ಪವೇ ನಿಜವಾದ ದೇಶಭಕ್ತಿ ಎಂದರು. ನಿಜಾಮರ ವಿರುದ್ಧ ಹೋರಾಟದಿಂದ ಕಲ್ಯಾಣ ಕರ್ನಾಟಕ ನಿರ್ಮಾಣದವರೆಗೂ ಅವರ ಪಾತ್ರ ಇಂದಿನ ಪೀಳಿಗೆಗೆ ದಾರಿ ದೀಪವಾಗಿದೆ ಎಂದರು.

ಪಟೇಲ್ ಅವರ ನಡಿಗೆಯ ಮಾದರಿಯಲ್ಲಿ ಬಿಜೆಪಿ ರಾಜ್ಯಾದ್ಯಂತ ಏಕತಾ ನಡಿಗೆಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಒಗ್ಗೂಡಿಸಿ ಭವ್ಯ ರ‌್ಯಾಲಿ ಆಯೋಜಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಬಿ.ಎಚ್. ನಾರಾಯಣಗೌಡ ಇತರರು ಇದ್ದರು.