ಜಿಲ್ಲೆ

24 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ನಿಂದ ಏಕತಾ ಓಟ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ 24 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ನಿಂದ ನಗರದಲ್ಲಿ ಮಂಗಳವಾರ ಏಕತಾ ಓಟ, ಸ್ವಚ್ಛತಾ ಅಭಿಯಾನ ಜರುಗಿತು.

ಕೆಸಿಡಿ ವೃತ್ತ ಮತ್ತು ಕೆಲಗೇರಿ ಕೆರೆ ಸುತ್ತಮುತ್ತ ಎನ್‌ಸಿಸಿ ಪಟುಗಳು ಸ್ವಚ್ಛತಾ ಕಾರ್ಯಕೈಗೊಂಡರು. ಏಕತಾ ಓಟ ಕೆಲಗೇರಿ ಕೆರೆಯಿಂದ ಸಾಯಿ ಮಂದಿರ, ದಾಸನಕೊಪ್ಪ ವೃತ್ತ, ಆಕಾಶವಾಣಿ ವೃತ್ತ, ಕೆಸಿಡಿ ವೃತ್ತದ ಮೂಲಕ ಕರ್ನಾಟಕ ಕಾಲೇಜು ಮೈದಾನ ತಲುಪಿತು. ಕರ್ನಾಟಕ ವಿಜ್ಞಾನ, ಕಲಾ ಮಹಾವಿದ್ಯಾಲಯ, ಕಿಟೆಲ್ ಕಾಲೇಜು, ಅಗ್ರಿ ಕಾಲೇಜು, ವಿದ್ಯಾರಣ್ಯ ಪಿಯು ಕಾಲೇಜು, ಸೇಂಟ್ ಜೋಸೆಫ್, ಜೆಎಸ್‌ಎಸ್ ಸ್ಕೂಲ್, ಕೆ.ಇ. ಬೋರ್ಡ್ಸ್, ಯುಪಿಎಸ್, ಆರ್‌ಎಲ್‌ಎಸ್, ಕರ್ನಾಟಕ ಹೈಸ್ಕೂಲ್, ವಿದ್ಯಾರಣ್ಯ, ಕೆಎಲ್‌ಇ , ರಾಷ್ಟ್ರೋತ್ಥಾನ, ಕೆಎನ್‌ಕೆ, ಪ್ರಜೆಂಟೇಶನ್, ಜೆಎಸ್‌ಎಸ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕೆಡೆಟ್‌ಗಳು ಸ್ವಚ್ಛತಾ ಅಭಿಯಾನ ಮತ್ತು ಏಕತಾ ಓಟದಲ್ಲಿ ಭಾಗವಹಿಸಿದ್ದರು.

ಕಮಾಂಡಿ0ಗ್ ಆಫೀಸರ್ ಕರ್ನಲ್ ಅನೂಪ್ ಗಾಂವಕರ, 5 ಗರ್ಲ್ಸ್ ಬಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಸುಜನ ರಾಯ್, ಎಒ ಲೆಫ್ಟಿನೆಂಟ್ ಕರ್ನಲ್ ವೈ.ಎಸ್. ರನಾವತ್ ನೇತೃತ್ವ ವಹಿಸಿದ್ದರು.

ಕ್ಯಾಪ್ಟನ್ ಎಂ.ಜಿ. ಹಿರೇಮಠ ಸ್ವಾತಂತ್ರ‍್ಯ ದಿನದ ಮಹತ್ವದ ಕುರಿತು, ಕ್ಯಾಪ್ಟನ್ ರಾಘವೇಂದ್ರ ಭಟ್ ಮತ್ತು ಲೆಫ್ಟಿನೆಂಟ್ ಸಂತೋಷ ಜಿಪಿ ರಾಷ್ಟç ನಿರ್ಮಾಣದಲ್ಲಿ ಎನ್‌ಸಿಸಿಯ ಪಾತ್ರ, ಕ್ಯಾಪ್ಟನ್ ವೈ.ಎಸ್. ರಾವುತ್ ಸ್ವಚ್ಛ ಭಾರತ ಅಭಿಯಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು.

ವಿವಿಧ ಸ್ಪರ್ಧೆ ವಿಜೇತರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ್ ಬಹುಮಾನ ವಿತರಿಸಿದರು. ಕ್ಯಾಪ್ಟನ್ ಡಾ. ಎಂ.ಎಚ್. ಮುಲ್ಲಾ, ಕ್ಯಾಪ್ಟನ್ ಮಹೇಶ ಕುರುಬರ, ಕೇರ್ ಟೇಕರ್ ಡಾ. ಸಮೀರ ಛಬ್ಬಿ, ಪ್ರಾಚಾರ್ಯರಾದ ಡಾ. ಎಂ.ಎಸ್. ಸಾಳುಂಕೆ, ಡಾ. ಐ.ಸಿ. ಮುಳಗುಂದ, ಎನ್‌ಸಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.