ಈ ಸಂದರ್ಭ ಪೊಲೀಸ್ ಠಾಣಾಧಿಕಾರಿಗಳಾದ ರಾಮಚಂದ್ರ, ಗೀತಾ, ಶ್ರೀನಿವಾಸ್, ಸಂಘ ಸಂಸ್ಥೆಗಳ ಪ್ರಮುಖರಾದ ಸುಬೇದಾರ್ ಎ.ಕೆ. ರಂಜಿತ್, ಮನು ಪೆಮ್ಮಯ್ಯ, ರಂಗಸ್ವಾಮಿ, ಡಾ ಹರಿ ಎ. ಶೆಟ್ಟಿ, ಮಹೇಂದ್ರ, ಎಂ ಎನ್. ಚಂದ್ರಮೋಹನ್, ಹೆಚ್ ಎಂ ರಘು, ಆಕಾಶ್, ಪುನೀತ್ ಪೊಲೀಸ್ ಸಿಬ್ಬಂದಿ, ಮಾಜಿ ಸೈನಿಕರು ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ನಜೀರ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಪ್ರತಿಯೊಬ್ಬರೂ ಉತ್ತಮ ನಡತೆ, ಸಮಯಪ್ರಜ್ಞೆ, ಶಿಸ್ತು ಪಾಲನೆ ಜೊತೆಗೆ ತಾಳ್ಮೆಯಿಂದ ಜೀವನ ಸಾಗಿಸಬೇಕು. ಅರಳಿದ ಹೃದಯದ ಮೂಲಕ ಪ್ರತಿಯೊಬ್ಬರನ್ನು ಪ್ರೀತಿಸುವಂತಾಗಬೇಕು. ಮನೆಯ ಕಸ ಕಸಬರಿಕೆಗೆ ಹಾಕಬೇಕು, ಮನದ ಕಸ ಪುಸ್ತಕ ಓದುವ ಮೂಲಕ ಸ್ವಚ್ಛಗೊಳಿಸಬೇಕು ಎಂದು ಹಿತನುಡಿಗಳನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಶಾಲನಗರ ಹಿರಿಯ ನಾಗರಿಕರು ಹಾಗೂ ನಿವೃತ್ತ ಶಿಕ್ಷಕ ಎಂ. ಎಚ್. ನಜೀರ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ
ಜಾತ್ರಾ ಮೈದಾನದಿಂದ ರೈತ ಸಹಕಾರ ಭವನ ರಸ್ತೆಗಾಗಿ ಐಬಿ ರಸ್ತೆ, ಗಣಪತಿ ದೇವಸ್ಥಾನ ಮುಖ್ಯರಸ್ತೆಯಲ್ಲಿ ಸಾಗಿದ ಓಟ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.
ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘ, ರೋಟರಿ ಕುಶಾಲನಗರ, ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ, ರೆಡ್ ಕ್ರಾಸ್, ಸ್ಕೌಟ್ಸ್, ಕಾವೇರಿ ಸ್ವಚ್ಛತಾ ಅಭಿಯಾನ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಟ್ರಸ್ಟ್, ಹೋಂ ಗಾರ್ಡ್ಸ್, ಸರ್ಕಾರಿ ಪದವಿ ಪೂರ್ವ ಕಾಲೇಜು ಎನ್ ಸಿ ಸಿ ತಂಡ, ಕುಶಾಲನಗರ ಟೌನ್, ಗ್ರಾಮಾಂತರ ಮತ್ತು ಸಂಚಾರಿ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಅವರು, ಪಟೇಲರ ಉಕ್ಕಿನ ಸಂಕಲ್ಪ, ವಾಸ್ತವವಾದಿ ನಿಲುವು ಮತ್ತು ಆಚಲ ದೇಶ ಪ್ರೇಮದಿಂದ ಸ್ಪೂರ್ತಿ ಪಡೆದು ಪ್ರತಿಯೊಬ್ಬರೂ ಸಾರ್ಥಕತೆಯನ್ನು ಮೆರೆಯಲು ಸಾಧ್ಯ. ಆಗಿನ ಕಾಲದಲ್ಲಿ ದೇಶದ ಭದ್ರತೆ ಆಡಳಿತ ಮತ್ತು ಆರ್ಥಿಕತೆಗೆ ಬಹುದೊಡ್ಡ ಸವಾಲು ಉಂಟಾಗಿದ್ದರೂ ಅಸಾಧ್ಯವೆನಿಸಿದ ಕಾರ್ಯವನ್ನು ಸಾಧ್ಯವಾಗಿಸಲು ಪಟೇಲರು ತಮ್ಮ ದೃಢ ಸಂಕಲ್ಪವನ್ನು ಪಣಕಿಟ್ಟಿದ್ದರು. ಅಖಂಡ ಭಾರತ ನಿರ್ಮಾಣದ ಹಿಂದಿನ ಶ್ರಮ ತ್ಯಾಗ ಬಲಿದಾನ ಮತ್ತು ರಾಜಕೀಯ ಚಾಣಾಕ್ಷತನವನ್ನು ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.
ಇಲ್ಲಿನ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಿಂದ ಬೆಳಗ್ಗೆ 6:30ಕ್ಕೆ ಆರಂಭಗೊಂಡ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಚಾಲನೆ ನೀಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮದಿನ ಅಂಗವಾಗಿ ಕುಶಾಲನಗರ ಟೌನ್ ಪೊಲೀಸ್ ಠಾಣೆ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏಕತೆಗಾಗಿ ಓಟ ಕಾರ್ಯಕ್ರಮ ಕುಶಾಲನಗರದಲ್ಲಿ ಶುಕ್ರವಾರ ನಡೆಯಿತು.
ವಿಜಯವಾಣಿ ಸುದ್ದಿಜಾಲ ಕುಶಾಲನಗರ