ಕೊಳ್ಳೇಗಾಲ ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕಾರ್ಯಕ್ರಮ ಹಾಗೂ ಲಿಂಗೈಕ್ಯ ಗೌ.ಮು.ಶಿ ವಪ್ಪದೇವರು ಹೊಂಡರಬಾಳು ದತ್ತಿ ಕಾರ್ಯಕ್ರಮಕ್ಕೆ ಮುದ್ದು ವೀರಪ್ಪ ಸ್ಮಾರಕ ಆಸ್ಪತ್ರೆಯ ವ್ಯೆದ್ಯ ಡಾ.ಲೋಕೇಶ್ ಚಾಲನೆ ನೀಡಿದರು. ನಾಗರಾಜು ಎಸ್.ಕೊಂಗರಹಳ್ಳಿ, ಡಾ.ಸೋಮಪ್ರಭಾ ಇತರರು ಇದ್ದಾರೆ. 
ಜಿಲ್ಲೆ

ನಾಡು, ನುಡಿ ವಿಚಾರದಲ್ಲಿ ಒಗ್ಗಟ್ಟು ಅಗತ್ಯ

ವಸಂತಕುಮಾರ್ ಬಿ

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಹಾಗೂ ಲಿಂಗೈಕ್ಯ ಗೌ.ಮು.ಶಿವಪ್ಪದೇವರು ಹೊಂಡರಬಾಳು ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುದ್ದು ವೀರಪ್ಪ ಸ್ಮಾರಕ ಆಸ್ಪತ್ರೆಯ ವ್ಯೆದ್ಯ ಡಾ.ಲೋಕೇಶ್ ಚಾಲನೆ ನೀಡಿದರು. ರೋಟರಿ ಸಂಸ್ಥೆ ಅಧ್ಯಕ್ಷೆ ಸರಸ್ವತಿ ಹೊನ್ನಪ್ಪ ಮಾತನಾಡಿ, ದೇಶಕ್ಕೆ ಕನ್ನಡ ನಾಡು ಮಾದರಿಯಾಗಿದೆ. ನಮ್ಮ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ನಾಡು, ನುಡಿ, ಜಲದ ವಿಚಾರದಲ್ಲಿ ನಾವೆಲ್ಲರೂ ಒಗ್ಗೂಡಿ ನಿಲ್ಲಬೇಕು. ಈ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದರು. ಶರಣರ ವಿಚಾರ ಧಾರೆಗಳು ಹಾಗೂ ನಾಡು ನುಡಿ ಸಂಸ್ಕೃತಿ ಬಗ್ಗೆ ಜಲ, ಗಡಿಯ ಕುರಿತು ಬಗ್ಗೆ ವಿವರಿಸಿದರು.

ಕನ್ನಡ ಸಾಹಿತ್ಯ ಪರಿತ್‌ನ ಅಧ್ಯಕ್ಷ ಲಯನ್ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೂಡುತ್ತದೆ, ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಯಾಗುತ್ತದೆ ಎಂಬ ಕವಿಸಾಲುಗಳನ್ನು ವಿವರಿಸಿದರು. ಲಯನ್ಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ಬಾಬು, ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ಸಿ.ನಾಗರಾಜು, ನಿರ್ದೇಶಕ ಲಯನ್ ಚೆನ್ನಮಾದೇಗೌಡ, ವಿರೂಪಾಕ್ಷ, ಬಿ.ಎಸ್ .ಮಹದೇವ ಪ್ರಸಾದ್ ಹಾಗೂ ಡಾ.ಸೋಮ ಪ್ರಭಾ, ಸುಧಾಪ್ರಕಾಶ್ ಇತರರು ಇದ್ದರು.