ಜಿಲ್ಲೆ

ಮೈನಿ ಸದನದಲ್ಲಿ ವಿಭಿನ್ನ ಕಲ್ಪನೆಯ ಚಿತ್ರ ಪ್ರದರ್ಶನ; ಫೆ.26 ರಿಂದ ಮಾ.31 ವರೆಗೆ ಆಯೋಜನೆ

Bengaluru - General - Rama Kishan K V

ಬೆಂಗಳೂರು: ಭಾರತೀಯ ಕಲಾ ಪರಂಪರೆಯ ಇತಿಹಾಸ ಮತ್ತು ಸಮಕಾಲೀನ ಚೈತನ್ಯವನ್ನು ಬೆಸೆಯುವ ವಿಶೇಷ ಚಿತ್ರಕಲಾ ಪ್ರದರ್ಶನವನ್ನು 'ದಿ ಮಾಸ್ಟರ್ಸ್​ ಆ್ಯಂಡ್​ ದಿ ಮಾಡರ್ನ್​' ಲ್ಯಾವೆಲ್ಲೆ ರಸ್ತೆಯ 38 ಮೈನಿ ಸದನದಲ್ಲಿ ಫೆ.26 ರಿಂದ ಮಾರ್ಚ್​ 31ರ ವರೆಗೆ ಆಯೋಜಿಸಿದೆ.

ಭಾರತೀಯ ಕಲೆಯ ಪರಂಪರೆ ಹಾಗೂ ಪ್ರಮುಖ ಕಲಾವಿದರ ಸೃಜನಶೀಲ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ವಿ.ಎಸ್​.ಗಾಯ್ತೊಂಡೆ, ಎಂ.ಎಫ್​. ಹುಸೇನ್​, ಎಫ್​.ಎನ್​. ಸೋಜಾ, ಗಣೇಶ್​ ಪೈನ್​ ಸೇರಿದಂತೆ ಹಿರಿಯ ಕಲಾವಿದರಾದ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದೆ. ಪ್ರದರ್ಶನದಲ್ಲಿ ಬಂಗಾಳಿ ಕಲಾವಿದರ ಚಿತ್ರಗಳೂ ಇರಲಿವೆ.

ಪ್ರದರ್ಶನವು ಭಾರತೀಯ ಕಲೆಯ ಶಾಶ್ವತ ಚೈತನ್ಯಕ್ಕೆ ಗೌರವವಾಗಿದೆ. ಇದು ಹಿರಿಯ ಕಲಾವಿದರು ಕೃತಿಗಳು ಮತ್ತು ಆಧುನಿಕ ಕಲಾವಿದರ ನವೀನ ಅನ್ವೇಷಣೆಗಳನ್ನು ಒಟ್ಟುಗೂಡಿಸಿರುವ ವೇದಿಕೆಯಾಗಿದೆ ಎಂದು "ದಿ ಮಾಸ್ಟರ್ಸ್​ ಆ್ಯಂಡ್​ ದಿ ಮಾಡರ್ನ್​'ನ ಕ್ಯುರೇಟರ್​ ಅರ್ಚನಾ ಶೆಣೈ ಅಭಿಪ್ರಾಯಪಟ್ಟಿದ್ದಾರೆ.