ವಿಜಯಪುರ:ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಫೆಬ್ರವರಿಯಲ್ಲಿ ಮುಕ್ತಾಯವಾಗಲಿದ್ದು, ಕೂಡಲೇ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ಆರಂಭಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಜಿಲ್ಲಾ ಟಕದ ಪದಾಧಿಕಾರಿಗಳು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.ಇಲ್ಲಿನ ಖಾಸಗಿ ಹೋಟೆಲ್ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸದರಿ ವಿಷಯದ ಕುರಿತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮಾತನಾಡಿದ ಒಕ್ಕೂಟದ ಅಧ್ಯ ಎಂ.ಎಚ್. ಪಠಾಣ, ಚುನಾವಣೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಆಯೋಗ ಸಿದ್ಧತೆ ನಡೆಸಿಲ್ಲ. ಚುನಾವಣೆ ವಿಳಂಬವಾದರೆ ಗ್ರಾಮದಲ್ಲಿ ಆಡಳಿತ ಯಂತ್ರ ಕುಸಿಯಲಿದ್ದು, ಗ್ರಾಮಸ್ಥರು ತೊಂದರೆ ಎದುರಿಸುವಂತಾಗಲಿದೆ. ರಾಜ್ಯ ಚುನಾವಣಾ ಆಯುಕ್ತರು, ರಾಜ್ಯ ಸರ್ಕಾರ ಇದುವರೆಗೂ ವಾರ್ಡ್ಗಳ ಮೀಸಲಾತಿ ನೀಡಿಲ್ಲ, ಅದರಿಂದ ಚುನಾವಣೆ ವಿಳಂಬವಾಗುವ ಆತಂಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಥಳಿಯ ಸ್ವಯಂ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ತಾಯಿ ಬೇರುಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಂತೆ ಸರ್ಕಾರದ ಪಾತ್ರ ನಿಭಾಯಿಸುತ್ತಿವೆ ಎಂದರು.ಮುಂದೂಡುವ ಆತಂಕ: ರಾಜ್ಯ ಸರ್ಕಾರ, ಪಕ್ಷಾಧಾರಿತ ಚುನಾವಣೆ ನಡೆಸುವುದು. ಏಕಸದಸ್ಯ ವಾರ್ಡ್ಗಳ ರಚನೆ ಹಾಗೂ ಈಗಿರುವ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಯನ್ನು ಹೆಚ್ಚು ಜನಸಂಖ್ಯೆಗೆ ಹೆಚ್ಚಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಪರಾಮರ್ಶಿಸಲು ಸಮಿತಿ ರಚಿಸುವ ಮೂಲಕ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ ಹಾಗೆ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಆತಂಕ್ಕೀಡು ಮಾಡಿವೆ ಎಂದರು.
ಸರ್ಕಾರ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವ ಮೂಲಕ ಸಂವಿಧಾನ ವಿರೋಧಿ ನಡೆಯಬಾರದು ಎಂಬ ಸಂದೇಶ ರವಾನಿಸಿದರು.ಒಕ್ಕೂಟದ ಸದಸ್ಯರಾದ ಶಿವಗೊಂಡ ರುದ್ರಗೌಡ, ಪ್ರದಿಪ ಪಾಟೀಲ, ಬಾಪುಗೌಡ ಬಿರಾದಾರ, ರಮೇಶ ಮಂಗಳೂರ, ಸಾಹೇಬಗೌಡ ಪಾಟೀಲ ಇತರರಿದ್ದರು.
ಫೋಟೋ : 30&10
ವಿಜಯಪುರದ ಖಾಸಗಿ ಹೋಟೆಲ್ನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಪ್ರದಿಪ ಪಾಟೀಲ, ಎಂ.ಎಚ್. ಪಠಾಣ, ಶಿವಗೊಂಡ ರುದ್ರಗೌಡ ಮತ್ತಿತರರಿದ್ದಾರೆ.