ಜಿಲ್ಲೆ

ಎಚ್​ಡಿಕೆಗೆ ಕೇಂದ್ರ ಸಚಿವ ಸ್ಥಾನ: ಸಂಭ್ರಮಿಸಿದ ಪತ್ರಿಕಾ ವಿತರಕರು

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ಡಿ. ಕುಮಾರಸ್ವಾಮಿ ಅವರು, ಉಕ್ಕು ಹಾಗೂ ಬೃಹತ್​ ಕೈಗಾರಿಕೆ ಇಲಾಖೆಯ ಸಚಿವರಾದ ಹಿನ್ನೆಲೆಯಲ್ಲಿ ಗಾಂಧಿ ಬಜಾರ್​ ಪತ್ರಿಕಾ ವಿತರಕರು ಭಾನುವಾರ ರಾತ್ರಿ ಸಿಹಿ ಹಂಚಿ ಸಂಭ್ರಮಿಸಿದರು. ಪತ್ರಿಕಾ ವಿತರಕ ರಾಜಣ್ಣ ನೇತೃತ್ವದಲ್ಲಿ ಹತ್ತಾರು ವಿತರಕರು ಕುಮಾರಸ್ವಾಮಿ ಪರ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದರು.