ಜಿಲ್ಲೆ

ರೈಲ್ವೆ ನಿಲ್ದಾಣದಲ್ಲಿಯೇ ಅಪರಿಚಿತ ಮೃತ: ವಾರಸುದಾರರಿದ್ದರೆ ಪೊಲೀಸರನ್ನು ಸಂಪರ್ಕಿಸಿ

ಮಂಡ್ಯ: ನಗರದ ರೈಲ್ವೆ ನಿಲ್ದಾಣದ ಸಮೀಪವೇ ಜು.13ರಂದು ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಸುಮಾರು 40 ರಿಂದ 45 ವರ್ಷದವನಾಗಿದ್ದು, ಸುಮಾರು ಐದು ಅಡಿ ಎತ್ತರವಿದ್ದಾರೆ. ಎರಡು ಮೊಣಕಾಲುಗಳು ಅಂಗವಿಕಲತೆಯಿಂದ ಕೂಡಿದೆ. ಮೈಮೇಲೆ ಗುಲಾಬಿ ಬಣ್ಣದ ಅರ್ಧತೋಳಿನ ಕಪ್ಪು ಮಿಶ್ರಿತ ಟೀ ಶರ್ಟ್ ಇದೆ. ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.