ವಿಜಯಪುರದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಟಕದ ಕಾರ್ಯಲಯದಲ್ಲಿ ಪಾರಿಜಾತ ಕಲಾವಿದೆ ಅನಸುಬಾಯಿ ವಡ್ಡರ ಅವರನ್ನು ಸನ್ಮಾನಿಸಲಾಯಿತು. ಬಾಳನಗೌಡ ಪಾಟೀಲ, ಶಂಕರ ಬೈಚಬಾಳ, ಮೋಹನ ಕಟ್ಟಿಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಜಾನಪದ ಕಲಾವಿದರ ಅನಾದಾರ ಸಲ್ಲ

ವಿಜಯಪುರ: ಜಾನಪದ ಕಲಾವಿದರಿಂದು ಕಷ್ಟದಲ್ಲಿದ್ದು ಕಲೆಯನ್ನೇ ಜೀವಾಳವಾಗಿಸಿಕೊಂಡವರು ಬಡತನದಲ್ಲಿ ಬದುಕು ಸಾಗಿಸುವಂತಾಗಿದೆ. ಕಲೆಯ ಬಗ್ಗೆ ಅಭಿಮಾನ ಇದ್ದವರೆ ನಮಗೆ ಆಸ್ತಿಯಾಗಿದ್ದಾರೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಸದಸ್ಯೆ ಪಾರಿಜಾತ ಕಲಾವಿದೆ ಅನಸುಬಾಯಿ ವಡ್ಡರ ಹೇಳಿದರು.

ನಗರದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಟಕದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಷ್ಟ ಕಲಾವಿದರ ಗೌರವ ಜನಪದ ಕಲಾವಿದರಿಗೆ ಇಲ್ಲ.

ಜನಪದ ಕಲಾವಿದರನ್ನು ಅನಾದರದಿಂದ ನೋಡಲಾಗುತ್ತದೆ. ಜನಪದ ಕಲಾವಿದರು ಮೂಲ ಕಲಾವಿದರಾಗಿದ್ದಾರೆ. ಅವರನ್ನು ಗುರುತಿಸಿ ಉಳಿಸಿ, ಬೆಳೆಸಲು ಬಾಳನಗೌಡ ಪಾಟೀಲರ ನೇತೃತ್ವದ ಕಜಾಪ ಶ್ರಮಿಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಕನ್ನಡ ಜಾನಪದ ಪರಿಷತ್ತು ಕಲಾವಿದರಿಗಾಗಿ ಮತ್ತು ಜನಪದ ಕಲೆ ಉಳಿಸುವುದಕ್ಕಾಗಿ ಹುಟ್ಟಿದ ಸಂಟನೆ. ಜಿಲ್ಲೆಯಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಯಕ್ರಮ ಸಂಟಿಸಿ ಕಲಾವಿದರಿಗೆ ವೇದಿಕೆ, ಸನ್ಮಾನ ಮತ್ತು ಪ್ರಶಸ್ತಿ ನೀಡುವ ಮೂಲಕ ಮಾಸಾಶನಕ್ಕೂ ಅನುಕೂಲ ಕಲ್ಪಿಸಿದೆ ಎಂದರು.

ಪ್ರವಚನಕಾರ ಬಾಬುರಾವ ಮಹಾರಾಜರು ಮಾತನಾಡಿ, ಜಾನಪದ ಕಲೆ ಮತ್ತು ಕಲಾವಿದರು ನಮ್ಮ ದೇಶದ ಸನಾತನ ಸಂಸತಿಯ ಕುರುಹು. ಕಲಾವಿದರನ್ನು ಗೌರವದಿಂದ ಕಾಣಬೇಕು ಅಂದಾಗ ಸಂಸತಿ ಉಳಿಯುತ್ತದೆ ಎಂದರು.

ಸಾಹಿತಿ ಶಂಕರ ಬೈಚಬಾಳ, ಸಾಂಸತಿಕ ಚಿಂತಕ ಮೋಹನ ಕಟ್ಟಿಮನಿ, ಪ್ರೊ. ಎಸ್​.ಎಲ್​. ಮೇತ್ರಿ, ಡಾ. ರಮೇಶ ತೇಲಿ, ಗುರುರಾಜ ಹಳ್ಳೂರ, ಆರ್​.ವಿ. ಪಾಟೀಲ, ಎ.ಆರ್​. ಮುಲ್ಲಾ ಮತ್ತಿತರರಿದ್ದರು.

ಎಸ್​.ಐ. ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ಮೌಲಾಸಾಹೇಬ ಜಹಾಗೀರದಾರ ವಂದಿಸಿದರು.