ಲಕ್ಷ್ಮೇಶ್ವರ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ವಾಣಿಜ್ಯೋದ್ಯಮಿಗಳ ಒಕ್ಕೂಟ ನೀಡಿರುವ ಬಂದ್ ಬೆಂಬಲಿಸಿ ಪಟ್ಟಣದಲ್ಲಿ ಗುರುವಾರ ಮುಖ್ಯ ಬಜಾರ್ ರಸ್ತೆ ವ್ಯಾಪಾರಸ್ಥರು ಮತ್ತು ಎಪಿಎಂಸಿ ವರ್ತಕರ ಸಂಘದವರು ಅಂಗಡಿ-ಮುAಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಸೋಮೇಶ್ವರ ಪಾದಗಟ್ಟಿ ಹತ್ತಿರ ಸೇರಿದ ವ್ಯಾಪಾರಸ್ಥರು ವಿದ್ಯುತ್ ದರ ಏರಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಕೆ. ಆನಂದಶೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
`ವಿದ್ಯುತ್ ಬೆಲೆ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತದೆ. ವಿದ್ಯುತ್ ದರ ಏರಿಕೆಯಿಂದ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ.
ಸ್ಥಿರ ಆದಾಯದ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಆರ್ಥಿಕ ಹೊರೆ, ಇದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊಡೆತ ಬಿದ್ದು ಜೀವನೋಪಾಯ ಕಷ್ಟವಾಗುತ್ತದೆ. ಸರ್ಕಾರ ತನ್ನ ಮೊಂಡುತನ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಬೇಕು' ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್, ಮುಖ್ಯ ಬಜಾರ್ ರಸ್ತೆ ವ್ಯಾಪಾಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ, ಚಂಬಣ್ಣ ಬಾಳಿಕಾಯಿ, ಮಹಾದೇವಪ್ಪ ರಗಟೆ, ಸಂಗಣ್ಣ ಹನುಮಸಾಗರ, ಬಾಳಾಸಾಹೇಬ ಮಾನ್ವಿ, ನೀಲಪ್ಪ ಸಂಶಿ, ರಾಜಣ್ಣ ಕೊಟಗಿ, ಚಂದ್ರಣ್ಣ ಮಾನ್ವಿ, ಬಸವರಾಜ ಮಹಾಂತಶೆಟ್ಟರ, ಗಣಪತಿ ಬೇವಿನಮರದ, ಅಶೋಕ ಬಟಗುರ್ಕಿ, ವೀರಣ್ಣ ಪವಾಡದ, ವೈಭವ ಗೋಗಿ, ಆದೇಶ ಬರಿಗಾಲಿ, ಶಕ್ತಿ ಕತ್ತಿ, ಮಾಲತೇಶ ಅಗಡಿ, ದೀಪು ಬಟಗುರ್ಕಿ, ಧರ್ಮಚಂದ ಮುಥಾ, ರಾಘವೇಂದ್ರ ವೆರ್ಣೇಕರ, ಚಿದಾನಂದ ಬೇವಿನಮರದ, ಸುಭಾಸ ಓದುನವರ, ರವಿ ಪುರಾಣಿಕಮಠ ಇತರರಿದ್ದರು.