ಗಡಿಕಲ್ ಚೆಕ್‌ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.25 ಮೌಲ್ಯದ ಸೀರೆ, ಪಂಚೆ, ದೋತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 
ಜಿಲ್ಲೆ

ಕೊಪ್ಪದಲ್ಲಿ ದಾಖಲೆ ಇಲ್ಲದ ಸೀರೆ, ಪಂಚೆಗಳು ವಶಕ್ಕೆ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ: ತಮಿಳುನಾಡಿನಿಂದ ತೀರ್ಥಹಳ್ಳಿ ಕಾರ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಪಂಚೆ, ಸೀರೆ, ದೋತಿಗಳನ್ನು ತಾಲೂಕಿನ ಗಡಿಕಲ್ಲು ಚೆಕ್‌ಪೋಸ್ಟ್ ಬಳಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್‌ನಲ್ಲಿ ಸುಮಾರು 1.25 ಲಕ್ಷ ಮೌಲ್ಯದ ಸೀರೆ, ಪಂಚೆ, ದೋತಿ ಇತ್ತು ಎನ್ನಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್‌ಐ ಬಸವರಾಜ್, ಪೇದೆಗಳಾದ ಗುರುಮೂರ್ತಿ, ರೇಖಾ, ರಮೇಶ್, ಅರಣ್ಯ ಇಲಾಖೆ ದಿನೇಶ್, ಮೆಸ್ಕಾಂ ಜೆ.ಇ ಸುನೀಲ್ ಇದ್ದರು.