ಧಾರವಾಡ: ನಗರದ ರಂಗಾಯಣ ಆವರಣದಲ್ಲಿ ಶನಿವಾರ ಉಂಡಿ ಹಬ್ಬದ ಕಳೆಗಟ್ಟಿತ್ತು. ಜಾನಪದ ಸಂಶೋಧನಾ ಕೇಂದ್ರದಿAದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸಂತಸದಿAದ ಪಾಲ್ಗೊಂಡಿದ್ದರು.
ಶ್ರಾವಣ ಮÁಸದ ಮೊದಲ ಹಬ್ಬ ನಾಗರಪಂಚಮಿ. ಅದಕ್ಕೂ ಮುನ್ನ ಬರುವುದು ಉಂಡಿ ಹಬ್ಬ. ಹಬ್ಬದಾಚರಣೆಗೆ ಜಮಾಯಿಸಿದ್ದ ಮಹಿಳೆಯರು ಬಗೆಬಗೆಯ ಉಂಡಿಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಸಂಸ್ಥೆಯ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ ನೇತೃತ್ವದಲ್ಲಿ ಮಹಿಳೆಯರು ಜನಪದ ಶೈಲಿಯಲ್ಲಿ ಹಬ್ಬದಾಚರಣೆ ಮಾಡಿದರು.
ಸಾಂಪ್ರದಾ¬ಕ ಶೈಲಿಯ ಸೀರೆಯುಟ್ಟ ಮಹಿಳೆಯರು ಬಗೆಬಗೆಯ ಉಂಡಿಗಳನ್ನು ತಂದು ಹುತ್ತಕ್ಕೆ ನೈವೇದ್ಯ ಅರ್ಪಿಸಿದರು. ಮರದಡಿ ನಿರ್ಮಿಸಿದ್ದ ಕೃತಕ ಹುತ್ತಕ್ಕೆ ಹಾಲೆರದರು. ನಾಗರಾಜನ ಕುರಿತ ಜನಪದ ಹಾಡುಗಳನ್ನು ಹಾಡಿದರು. ಭಾಗವಹಿಸಿದ್ದ ಮಕ್ಕಳು ಬಗೆಬಗೆಯ ಉಂಡಿಗಳನ್ನು ತಿಂದು ಖುಷಿಪಟ್ಟರು. ಅಲ್ಲಿಯೇ ಮರಕ್ಕೆ ಕಟ್ಟಲಾಗಿದ್ದು ಜೋಕಾಲಿ ಆಡಿ ಸಂಭ್ರಮಿಸಿದರು.
ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯ, ಸಂಸ್ಕೃತಿ, ಜಾನಪದ ಆಚರಣೆಗಳ ಬಗ್ಗೆ ಮÁಹಿತಿ ನೀಡುವ ಜೊತೆಗೆ ಅವುಗಳ ಮಹತ್ವ ತಿಳಿಸಿಕೊಡಲು ಇಂಥ ಹಬ್ಬಗಳನ್ನು ಆಯೋಜಿಸುತ್ತಿದ್ದೇವೆ ಎಂದು ವಿಶ್ವೇಶ್ವರಿ ಹಿರೇಮಠ ಪ್ರತಿಕ್ರಿಯಿಸಿದರು.