ಜಿಲ್ಲೆ

ವಿಚಾರಧೀನ ಮಹಿಳಾ ಕೈದಿ ಎದೆನೋವಿನಿಂದ ಸಾವು

ಹಾವೇರಿ: ವಿಚಾರಧೀನ ಮಹಿಳಾ ಕೈದಿ ಎದೆನೋವಿನಿಂದ ಮೃತಪಟ್ಟ ಘಟನೆ ನಗರದ ಜಿಲ್ಲಾ ಕಾರ್ಯಾಗೃಹದಲ್ಲಿ ನಡೆದಿದೆ.

ಹಾನಗಲ್ಲ ತಾಲೂಕಿನ ಕೊಪ್ಪಸಿರ್ಕೊಪ್ಪ ಗ್ರಾಮದ ಪುಷ್ಪ ಬಸವರಾಜ ಓಲೇಕಾರ (35) ಮೃತ ಮಹಿಳೆ.

ಇವಳನ್ನು ವಿವಿಧ ಅಪರಾಧ ಪ್ರಕರಣದಲ್ಲಿ ಬಂಧಿಸಿ 2024 ಡಿಸೆಂಬರ್​ 27ರಂದು ಜಿಲ್ಲಾ ಕಾರ್ಯಾಗೃಹದಲ್ಲಿಡಲಾಗಿತ್ತು. ಭಾನುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.