ಜಿಲ್ಲೆ

ಗುರುಗಳ ಮಹತ್ವವನ್ನು ಅರಿಯಿರಿ

ರವಿಕುಮಾರ್ ಪಿ. ಕೆ

ಹೊಳೆನರಸೀಪುರ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ತತ್ವ ವಿದ್ಯಾರ್ಥಿಗಳಲ್ಲಿ ಮನನವಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಜೇವು ಮಲ್ಲಿಕಾರ್ಜುನ್ ಅಭಿಪ್ರಾಯ ಪಟ್ಟರು.

ತಾಲೂಕಿನ ಕಸಬಾ ಹೋಬಳಿಯ ಜಿ.ಸೋಮನಹಳ್ಳಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರು- ಶಿಷ್ಯರ ಪವಿತ್ರ ಬಾಂಧವ್ಯದ ಬಗ್ಗೆ ನೆನಪು ಮಾಡಿಕೊಡುವುದರ ಜತೆಗೆ ಗುರುವಿನ ಮಹತ್ವದ ಕುರಿತು ಆಳವಾದ ಚಿಂತನೆಯನ್ನು ಹಂಚಿಕೊಂಡರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಾಜು, ತಮ್ಮ ವಿದ್ಯಾರ್ಥಿಗಳ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಾಗ ಭಾವುಕರಾದರು. ಅವರು ಸೋಮನಹಳ್ಳಿ ಶಾಲೆ ಯಾವತ್ತೂ ಮುಚ್ಚದಂತೆ ನಾವೆಲ್ಲರೂ ನಿಗಾವಹಿಸಬೇಕು. ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮತ್ತೊಬ್ಬ ನಿವೃತ್ತ ಶಿಕ್ಷಕ ರಮೇಶ ಗುರುವಂದನೆ ಸ್ವೀಕರಿಸಿ ಮಾತನಾಡಿ, ತಮ್ಮ ಸುದೀರ್ಘ ಸೇವಾ ಜೀವನವನ್ನು ನೆನೆದು ಭಾವುಕರಾದರು. ಈ ಊರನ್ನೇ ನನ್ನ ಸ್ವಂತ ಊರಿನಂತೆ ನಾನು ಪ್ರೀತಿಸುತ್ತಿದ್ದೆ ಎಂದು ಮನದಾಳದ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಕ್ಲಸ್ಟರ್‌ನ ಶಿಕ್ಷಕಿ ಪದ್ಮಜಾ, ಶಿಕ್ಷಕ ಸೋಮಶೇಖರ್, ವಿದ್ಯಾರ್ಥಿಗಳಾದ ಎಸ್.ಆರ್. ಅಭಿಜಿತ್, ಎಸ್.ಆರ್.ಅಶ್ವಿನಿ, ದಯಾನಂದ ಎಸ್. ಎಂ., ಪ್ರಶಾಂತ ಎಸ್., ಎಸ್.ಎಲ್. ನೇತ್ರಾ, ಎಸ್. ಪಿ.ಶ್ರುತಿ, ಸ್ಪೂರ್ತಿ ಎಸ್.ಆರ್. ಶ್ವೇತಾ ಎಸ್. ಆರ್., ಶಿವ ಎಸ್.ಪಿ., ಶಶಿಕುಮಾರ.ಎಸ್.ಎನ್., ಸುನಿತಾ.ಎಸ್.ಕೆ., ವೇದಮೂರ್ತಿ ಹಾಗೂ ಗ್ರಾಮದ ಮುಖಂಡರು, ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಇತರರಿದ್ದರು.